ADVERTISEMENT

ಬಿಗ್‌ಬಾಸ್ ಮನೆಗೆ ರಕ್ಷಿತಾ ತಾಯಿ ಬರುತ್ತಿದ್ದಂತೆ ಕ್ಷಮೆಯಾಚಿಸಿದ ಧ್ರುವಂತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 5:46 IST
Last Updated 24 ಡಿಸೆಂಬರ್ 2025, 5:46 IST
<div class="paragraphs"><p>ರಕ್ಷಿತಾ ತಾಯಿ </p></div>

ರಕ್ಷಿತಾ ತಾಯಿ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ 87ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಬಿಗ್‌ಬಾಸ್‌ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದಾರೆ. ನಿನ್ನೆಯ (ಮಂಗಳವಾರ) ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಗೆ ರಾಶಿಕಾ, ಸೂರಜ್‌ ಹಾಗೂ ಧನುಷ್‌ ಕುಟುಂಬದ ಸದಸ್ಯರು ಬಂದಿದ್ದರು.

ADVERTISEMENT

ಇಂದು (ಬುಧವಾರ) ರಕ್ಷಿತಾ ಶೆಟ್ಟಿ ಅವರ ತಾಯಿ ಬಿಗ್‌ಬಾಸ್‌ ಮನೆಗೆ ‌ಪ್ರವೇಶಿಸಲಿದ್ದಾರೆ. ಕಲರ್ಸ್‌ ಕನ್ನಡ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್‌ ಮನೆಗೆ ರಕ್ಷಿತಾ ತಾಯಿ ಬಂದಿದ್ದಾರೆ. ಅಮ್ಮನನ್ನು ನೋಡುತ್ತಿದ್ದಂತೆ ರಕ್ಷಿತಾ ಬಿಗಿಯಾಗಿ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

ಇದೇ ವೇಳೆ ಧ್ರುವಂತ್ ಅವರು ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಆಗ ತಮಾಷೆ ಮಾಡುತ್ತ ನೀವು ಬೆತ್ತ ತರಬೇಕಿತ್ತು ಎಂದು ಧ್ರುವಂತ್ ಹೇಳಿದರು. ಆಗ ಗಿಲ್ಲಿ ಆ ಬೆತ್ತದಲ್ಲಿ ನಿನಗೆ ಹೊಡೆಯುತ್ತಿದ್ದರು ಎಂದು ಕಾಲೆಳೆದಿದ್ದಾರೆ. ಸದ್ಯ ಈಗ ಬಿಗ್‌ಬಾಸ್‌ ಮನೆಯಲ್ಲಿ 11 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅದರಲ್ಲಿ 10 ಮಂದಿ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಓರ್ವ ಸ್ಪರ್ಧಿಗೆ ಈ ವಾರ ಕೊನೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.