ಜಾಹ್ನವಿ
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಸೀಸನ್‌ಗೆ ಈಗಾಗಲೇ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿದ್ದಾರೆ. ಮನೆಗೆ ಬಂದ ಮೊದಲ ದಿನವೇ ಸ್ಪರ್ಧಿಗಳು ದೊಡ್ಡ ಕೋಲಾಹಲವನ್ನು ಸೃಷ್ಟಿಸಿದ್ದಾರೆ. ಇಷ್ಟು ದಿನ ಅಶ್ವಿನಿ ಜೊತೆಗೆ ಸೇರಿಕೊಂಡು ಎಲ್ಲರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಜಾಹ್ನವಿ ಇದೀಗ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಾಹ್ನವಿಗೆ ರಿಷಾ ಕೆಲವೊಂದು ಕಿವಿಮಾತು ಹೇಳಿದ್ದಾರೆ. ರಿಷಾ ಮಾತನ್ನು ಕೇಳಿದ ಜಾಹ್ನವಿ ಅವರು ಅಶ್ವಿನಿ ಗೌಡ ಹಾಗೂ ಕಾವ್ಯ ಗೌಡ ಮುಂದೆ ಅತ್ತಿದ್ದಾರೆ.
ಪ್ರೊಮೋದಲ್ಲಿ ಏನಿದೆ?
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ರಿಷಾ ಅವರು ಜಾಹ್ನವಿ ಮುಂದೆ ಪುಕ್ಕ ಥರನೇ ಇದ್ದು ಬಿಟ್ರೆ ಜಾಹ್ನವಿ ಕಳೆದು ಹೋಗುತ್ತಾರೆ. ಸಾಕಷ್ಟು ಕೆಲಸ ಮಾಡಬೇಕು ಎಂದು ಕನಸು ಕಟ್ಟಿಕೊಂಡು ಬಂದಿರುತ್ತೀರಾ. ಈಗ ನಿಮಗೆ ನೀವೇ ಮುಳ್ಳಾಗುತ್ತಿದ್ದೀರಾ ಎಂದು ಅನಿಸುತ್ತಿದೆ’ ಅಂತ ಹೇಳಿದ್ದಾರೆ. ಇದಾದ ಬಳಿಕ ಜಾಹ್ನವಿ ‘ನನ್ನ ಗುಂಡಿನಾ ನಾನೇ ತೋಡಿಕೊಳ್ಳುತ್ತಿದ್ದೇನೆ ಎಂದು ಅನಿಸುತ್ತದೆ’ ಅಂತ ಕಣ್ಣೀರಿಟ್ಟಿದ್ದಾರೆ. ಆಗ ಅಶ್ವಿನಿ ಗೌಡ ಎಷ್ಟೇ ಸಮಾಧಾನ ಮಾತುಗಳನ್ನು ಆಡಿದರು ಜಾಹ್ನವಿ ಅಳುತ್ತಲೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.