ADVERTISEMENT

ಬೆಂಬಲ ನೀಡಿದರೂ ಕಾವ್ಯ ಫೈನಲಿಸ್ಟ್ ಆಗಲಿಲ್ಲ: ಕೊನೆ ಕ್ಷಣದಲ್ಲಿ ಆಗಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2025, 5:44 IST
Last Updated 15 ಅಕ್ಟೋಬರ್ 2025, 5:44 IST
<div class="paragraphs"><p>ಕಾವ್ಯ ಮತ್ತು ರಾಶಿಕಾ</p></div>

ಕಾವ್ಯ ಮತ್ತು ರಾಶಿಕಾ

   

ಚಿತ್ರ: ಕಲರ್ಸ್ ಕನ್ನಡ/ ಇನ್‌ಸ್ಟಾಗ್ರಾಮ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಆರಂಭವಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್‌ ಮಿಡ್‌ ಸೀಸನ್‌ ಫಿನಾಲೆ ನಡೆಯಲಿದ್ದು, ಹೀಗಾಗಿ ಸ್ಪರ್ಧಿಗಳ ಮಧ್ಯೆ ದೊಡ್ಡ ಪೈಪೋಟಿ ಏರ್ಪಟಿದೆ. ಬಿಗ್‌ಬಾಸ್‌ ಮಿಡ್‌ ಸೀಸನ್ ಫಿನಾಲೆ ಫೈನಲಿಸ್ಟ್ ಆಗಬೇಕೆಂದು ಸ್ಪರ್ಧಿಗಳು ನಾ ಮುಂದು ತಾ ಮುಂದು ಎಂದು ಟಾಸ್ಕ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ತಮಗೆ ಸಿಕ್ಕ ಅವಕಾಶವನ್ನು ಹಾಗೂ ಮನೆಮಂದಿ ಬೆಂಬಲ ನೀಡಿದರು ಕಾವ್ಯ ಫೈನಲಿಸ್ಟ್ ಆಗಿಲ್ಲ.

ADVERTISEMENT

ಇದೀಗ ಕಲರ್ಸ್‌ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಆ ಪ್ರೊಮೋದಲ್ಲಿ ಬಿಗ್‌ಬಾಸ್ ಆವರಣದಲ್ಲಿ ಹಲವಾರು ಹಲಗೆಗಳನ್ನು ಇಡಲಾಗಿದೆ. ಜೋಡಿಸಿಟ್ಟ ಹಲಗೆಯ ಮೇಲೆ ಎರಡು ಬಣ್ಣದ ವೃತ್ತಾಕಾರದ ಕಾರ್ಡ್‌ಗಳನ್ನು ಇರಿಸಲಾಗಿದೆ. ಇಬ್ಬರು ಸ್ಪರ್ಧಿಗಳು ತಮಗೆ ಸೂಚಿಸಿರುವ ಬಣ್ಣದ ಕಾರ್ಡ್ ಬರುವಂತೆ ಒಂದಾದ ನಂತರ ಒಂದರಂತೆ ಒಂದು ಹಲಗೆಯಿಂದ ಮತ್ತೊಂದು ಹಲಗೆಗೆ ಹೋಗಲು ಕೋಲು ಬಳಸಿಕೊಳ್ಳಬೇಕು. ಹೀಗೆ ಈ ಟಾಸ್ಕ್‌ ಆಡುತ್ತಿದ್ದಾಗ ಮನೆಮಂದಿ ಕಾವ್ಯಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಅಷ್ಟು ಜನ ಬೆಂಬಲ ಸೂಚಿಸಿದರು ಕಾವ್ಯ ಕೊನೆ ಕ್ಷಣದಲ್ಲಿ ಆಟದಿಂದ ಹೊರಬಿದ್ದಿದ್ದಾರೆ.

ಕೊನೆ ಕ್ಷಣದಲ್ಲಿ ಏನಾಯ್ತು?

ಈ ಹಲಗೆಯ ಟಾಸ್ಕ್‌ ಅನ್ನು ರಾಶಿಕಾ ಹಾಗೂ ಕಾವ್ಯ ಆಡುತ್ತಿದ್ದರು. ಆಗ ಮನೆಮಂದಿ ಕಾವ್ಯಳಿಗೆ ಬೆಂಬಲ ಸೂಚಿದ್ದಾರೆ. ಹೀಗೆ ಟಾಸ್ಕ್‌ ಶುರುವಾಗುತ್ತಿದ್ದಂತೆ ಕಾವ್ಯ ಕೊಂಚ ಎಡವಿದ್ದಾರೆ. ಕಾವ್ಯಗೆ ಕೊಟ್ಟ ಹಳದಿ ಬಣ್ಣದ ಕಾರ್ಡ್‌ಗಳನ್ನು ಕೈಯಲ್ಲಿ ತೆಗೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಉಸ್ತುವಾರಿ ಅರ್ಥಕ್ಕೆ ಆಟ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಕಾವ್ಯ ಮತ್ತೆ ಟಾಸ್ಕ್‌ನಲ್ಲಿ ಭಾಗಿಯಾಗುತ್ತಿದ್ದಂತೆ ಉಸ್ತುವಾರಿ ಧ್ರುವಂತ್‌ ಆಟವನ್ನು ಮುಂದುವರೆಸುವುದಕ್ಕೆ ಬಿಡಲಿಲ್ಲ. ಹೀಗಾಗಿ ಕಾವ್ಯ ಫೈನಲಿಸ್ಟ್ ಟಾಸ್ಕ್‌ನಿಂದ ಆಚೆ ಉಳಿದುಕೊಂಡಿದ್ದಾರೆ. ರಾಶಿಕಾ ಹಾಗೂ ಕಾವ್ಯ ಇಬ್ಬರ ಮಧ್ಯೆ ಆಟ ಗೆದ್ದಿದ್ದು ಯಾರು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.