ADVERTISEMENT

ಬಿಗ್‌ಬಾಸ್ ಮೊದಲ ಫಿನಾಲೆಗೆ ಅಖಾಡ ಸಿದ್ಧ: ಅಳಿವು-ಉಳಿವಿನ ಹೋರಾಟದಲ್ಲಿ ಸ್ಪರ್ಧಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2025, 11:41 IST
Last Updated 15 ಅಕ್ಟೋಬರ್ 2025, 11:41 IST
<div class="paragraphs"><p>ನಟ ಸುದೀಪ್</p></div>

ನಟ ಸುದೀಪ್

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಆರಂಭವಾಗಿ 18 ದಿನಗಳು ಕಳೆದಿವೆ. ಈ ಬಾರಿಯ ಬಿಗ್‌ಬಾಸ್‌ ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ (Expect The Unexpected) ಎಂಬ ಪರಿಕಲ್ಪನೆಯೊಂದಿಗೆ ಆರಂಭವಾಗಿದೆ. ಈಗ ಬಿಗ್‌ಬಾಸ್ ಮೊದಲ ಫಿನಾಲೆಗೆ ಅಖಾಡ ಸಿದ್ಧವಾಗಿದ್ದು, ಅಳಿವು- ಉಳಿವಿನ ಹೋರಾಟ ಶುರುವಾಗಿದೆ.

ADVERTISEMENT

ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯುತ್ತಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ನೀಡಲಿದೆ. ಈ ಫಿನಾಲೆಯಲ್ಲಿ ಹಲವರ ಎಲಿಮಿನೇಷನ್ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ.

ಕಲರ್ಸ್ ಕನ್ನಡ ಮೊದಲ ಫಿನಾಲೆಯ ಪ್ರೊಮೋವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್ ‘ಈ ಸೀಸನ್‌ ಮೊದಲ ಗ್ರ್ಯಾಂಡ್‌ ಫಿನಾಲೆ ಈ ವಾರಂತ್ಯದಲ್ಲಿಯೇ ನಡೆಯಲಿದೆ. ಈ ಮೊದಲ ಫಿನಾಲೆಯಲ್ಲಿ ಉಳಿಯುವವರು ಎಷ್ಟು ಮತ್ತು ಹೊಸದಾಗಿ ಪ್ರವೇಶಿಸುವವರು ಎಷ್ಟು? ಹೆಜ್ಜೆ ಹೆಜ್ಜೆಗೂ ಅಚ್ಚರಿ ಹಾಗೂ ಕುತೂಹಲ ಮೂಡಿಸುತ್ತ ತನ್ನ ಮೊದಲ ಗ್ರ್ಯಾಂಡ್‌ ಫಿನಾಲೆ ಹೊಸ್ತಿಲಲ್ಲಿ ನಿಂತಿದೆ’ ಎಂದಿದ್ದಾರೆ.

ಇನ್ನು, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ನೀಡಲಾಗುತ್ತದೆ. ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡ ಬಿ‌ಗ್‌ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ ಆಟಗಳನ್ನು ಆಡುವುದಲ್ಲದೆ, ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆಯನ್ನು ನೀಡಲಿದ್ದಾರೆ. ‌

ಮಿಡ್ ಸೀಸನ್ ಫಿನಾಲೆ ಯಾವಾಗ?

ಅಕ್ಟೋಬರ್ 18 ಮತ್ತು 19ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೊ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಒಟ್ಟು 6 ಗಂಟೆಗಳ ಕಾಲ ಬಿಗ್‌ಬಾಸ್‌ ವೀಕ್ಷಕರಿಗೆ ಸಂಭ್ರಮ ನೀಡಲು ತಂಡ ಸಿದ್ಧವಾಗಿದೆ. ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಅತ್ಯಂತ ಅಪೂರ್ವ ಅಪರೂಪದ ಆಕರ್ಷಕ ಕಾರ್ಯಕ್ರಮವಾಗಿ ಇರಲಿದೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ, ಸ್ಪಂದನಾ ಹಾಗೂ ರಾಶಿಕಾ ಈ ಐದು ಮಂದಿ ಫೈನಲಿಸ್ಟ್‌ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ. ಉಳಿದವರೆಲ್ಲಾ ಈ ವಾರ ನಾಮಿನೇಟ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.