
ಮ್ಯೂಟಂಟ್ ರಘು
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಸೀಸನ್ 12 ಇತ್ತೀಚೆಗೆ ಮುಕ್ತಾಯ ಕಂಡಿತ್ತು. ಸದ್ಯ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸಂದರ್ಶನ ನೀಡುವುದರಲ್ಲಿ ಸಕ್ರಿಯರಾಗಿದ್ದಾರೆ. ಇದರ ನಡುವೆ ಬಿಗ್‌ಬಾಸ್ ಮನೆಗೆ ಹೋಗುವ ಮೊದಲು 100 ಕೆ.ಜಿಯಿದ್ದ ಮ್ಯೂಟಂಟ್ ರಘು ಅವರ ತೂಕದಲ್ಲಿ ಭಾರಿ ಬದಲಾವಣೆಯಾಗಿದೆ.
ಮ್ಯೂಟಂಟ್ ರಘು, ಅಶ್ವಿನಿ ಗೌಡ
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಮ್ಯೂಟಂಟ್ ರಘು ಅವರು 4ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಬಿಗ್‌ಬಾಸ್‌ನಿಂದ ಆಚೆ ಬರುತ್ತಿದ್ದಂತೆ ತಮ್ಮ ತೂಕವನ್ನು ಪರೀಕ್ಷಿಸಿದ್ದಾರೆ. ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬಿಗ್‌ಬಾಸ್‌ಗೆ ಹೋಗುವ ಮೊದಲು, ಬಿಗ್‌ಬಾಸ್ ನಂತರದ ಕ್ಲಿಕ್ಕಿಸಿಕೊಂಡ ಫೋಟೊವನ್ನು ಹಂಚಿಕೊಂಡಿದ್ದಾರೆ.
ಅದರ ಜೊತೆಗೆ ‘ಬಿಗ್‌ಬಾಸ್ 12ರ 100 ದಿನಗಳ ಅದ್ಭುತ ಪ್ರಯಾಣ. ನಾನು 25 ಕೆ.ಜಿ ತೂಕ ಇಳಿಸಿಕೊಂಡೆ. ಆದರೆ ಸಾಕಷ್ಟು ಜನರ ಬೆಂಬಲ ಸಿಕ್ಕಿತು. ಪ್ರತಿದಿನ ನನ್ನನ್ನು ನಾನು ತಡೆದುಕೊಳ್ಳುವುದು ಅತ್ಯಂತ ಕಠಿಣದ ಕೆಲಸವಾಗಿತ್ತು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ಮತ್ತು ನನ್ನ ಪ್ರಯಾಣವನ್ನು ಖಂಡಿತವಾಗಿಯೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಎಲ್ಲಾ ಬೆಂಬಲಕ್ಕೆ ಧನ್ಯವಾದಗಳು‘ ಎಂದು ಬರೆದುಕೊಂಡಿದ್ದಾರೆ.
ರಘು ಅವರು ಬಿಗ್‌ಬಾಸ್‌ಗೆ ಹೋಗುವ ಮೊದಲು 100 ಕೆ.ಜಿ ತೂಕವನ್ನು ಹೊಂದಿದ್ದರು. ಶೋ ಮುಕ್ತಾಯದ ಬಳಿಕ ಈಗ 25 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಮುಂದಿನ ತಮ್ಮ ಪ್ರಯಾಣದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ರಘು ಅವರು ಹೇಳಿದ್ದಾರೆ. ಸದ್ಯ ಇದೆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.