ADVERTISEMENT

ಧ್ರುವಂತ್ ಮೇಲೆ ಕೈ ಮಾಡಲು ಹೋದ ರಜತ್: ಆಟಕ್ಕೂ ಮೊದಲೇ ಮನೆಯಲ್ಲಿ ಹೊಡೆದಾಟ ಶುರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2025, 9:53 IST
Last Updated 9 ಡಿಸೆಂಬರ್ 2025, 9:53 IST
<div class="paragraphs"><p>ಧ್ರುವಂತ್,&nbsp;ರಜತ್</p></div>

ಧ್ರುವಂತ್, ರಜತ್

   

ಚಿತ್ರ: ಇನ್‌ಸ್ಟಾಗ್ರಾಂ

ಬಿಗ್‌ಬಾಸ್ 12ನೇ ಆವೃತ್ತಿಗೆ ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ರಜತ್‌ ಕಿಶನ್‌ ಏಕಾಏಕಿ ಧ್ರುವಂತ್‌ ಮೇಲೆ ಕೋಪಗೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಧ್ರುವಂತ್‌ ಮೇಲೆ ರಜತ್‌ ಕೈ ಮಾಡಲು ಮುಂದಾಗಿದ್ದು ಪ್ರೊಮೋದಲ್ಲಿ ಕಾಣಿಸಿದೆ.

ADVERTISEMENT

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿತ್ತು. ನಾಮಿನೇಟ್‌ ಮಾಡುವವರು ಸ್ಪರ್ಧಿಗಳನ್ನು ಈಜುಕೊಳಕ್ಕೆ ತಳ್ಳಬೇಕು ಅಂತ ಇತ್ತು. ಆಗ ಕಾವ್ಯಾ ಅವರು ರಜತ್‌ ಅವರನ್ನ ನಾಮಿನೇಟ್ ಮಾಡಿದ್ದಾರೆ. ಇದರಿಂದ ರಜತ್‌ ಸಿಟ್ಟಾದರು. ಇದೇ ವೇಳೆ ಧ್ರುವಂತ್‌ ‘ನೋಡಿ ಏಕವಚನದಲ್ಲಿ ಮಾತನಾಡುತ್ತಾರೆ’ ಎಂದು ಹೇಳಿದ್ದಾರೆ. ಇದರಿಂದ ಮತ್ತೆ ಆಕ್ರೋಶಗೊಂಡ ರಜತ್ ಏಕಾಏಕಿ ಧ್ರುವಂತ್ ಜೊತೆ ಕಿತ್ತಾಟ ಶುರು ಆಗಿದೆ. ಬಳಿಕ ಧ್ರುವಂತ್ ಮೇಲೆ ರಜತ್ ಕೈ ಮಾಡಲು ಮುಂದಾಗಿದ್ದಾರೆ.

ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ನಿಜಕ್ಕೂ ಧ್ರುವಂತ್‌ ಹಾಗೂ ರಜತ್‌ ಮಧ್ಯೆ ಏನಾಯಿತು? ಅಸಲಿಗೆ ಈ ಇಬ್ಬರ ನಡುವೆ ಗಲಾಟೆ ಆಗಿದ್ದು ಏಕೆ ಎಂದು ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.