ADVERTISEMENT

ನನ್ನ ಮದುವೆ ಆಗೋ ಹುಡುಗ ಹೀಗೆ ಇರಬೇಕು: ರಕ್ಷಿತಾ ಶೆಟ್ಟಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2025, 10:56 IST
Last Updated 27 ನವೆಂಬರ್ 2025, 10:56 IST
<div class="paragraphs"><p>ರಕ್ಷಿತಾ ಶೆಟ್ಟಿ</p></div>

ರಕ್ಷಿತಾ ಶೆಟ್ಟಿ

   

ಚಿತ್ರ:ಇನ್‌ಸ್ಟಾಗ್ರಾಮ್

ದಿನದಿಂದ ದಿನಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಸದ್ದು ಜೋರಾಗುತ್ತಿದೆ. ಈ ಸೀಸನ್‌ನಲ್ಲಿ ಅತ್ಯಂತ ಕಿರಿಯ ಸ್ಪರ್ಧಿಯಾಗಿರುವ ರಕ್ಷಿತಾ ಶೆಟ್ಟಿ ಈಗ ತಾನು ಮದುವೆ ಆಗುವ ಹುಡುಗ ಹೀಗೆ ಇರಬೇಕು ಎಂದು ಎಲ್ಲರ ಮುಂದೆ ಬಾಯಿ ಬಿಟ್ಟಿದ್ದಾಳೆ.

ADVERTISEMENT

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್‌ ಮನೆಗೆ ಬಂದಿರುವ ಅತಿಥಿಗಳ ಮುಂದೆ ಮದುವೆ ಆಗುವ ಹುಡುಗ ಹೇಗೆಲ್ಲ ಇರಬೇಕು ಎಂದು ಹೇಳಿದ್ದಾರೆ. ‘ನನ್ನ ಹಾಗೆ ನನಗೆ ಯಾವ ಹುಡುಗ ಸಿಕ್ಕಿಲ್ಲ. ನಾನು ಮದುವೆ ಆಗುವ ಹುಡುಗ ರೈತ ಆಗಿರಬೇಕು‌. ಜಮೀನು ಇರಬೇಕು, ಹಳ್ಳಿಯವನಾಗಿರಬೇಕು. ನನ್ನ ಹುಡುಗ ಕೆಲಸ ಮಾಡುವಾಗ ನಾನು ವ್ಲಾಗ್ (Vlog) ಮಾಡುತ್ತಾ ಇರಬೇಕು’ ಎಂದರು,

‘ನನ್ನ ಕುಟುಂಬದಲ್ಲಿ ಯಾರೂ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲ. ನನ್ನ ತಂದೆ-ತಾಯಿಗೆ ಸಾಮಾಜಿಕ ಜಾಲತಾಣ ಅಂದರೆ ಗೊತ್ತಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಶಾಲಿ ಆಗಿದ್ದೀನಿ. ಮದುವೆಯಾದ ಬಳಿಕ ವಿಡಿಯೊ ಮಾಡೋದು ನನಗೆ ಇಷ್ಟ ಇದೆ. ಬೆಳಗ್ಗೆಯಿಂದ ನನ್ನ ಜೀವನ ಹೀಗೆ ಸಾಗಬೇಕು. ದಿನಪೂರ್ತಿ ನಡೆಯೋದನ್ನು ನಾನು ವಿಡಿಯೊ ಮಾಡಬೇಕು. ಮದುವೆ ಬಳಿಕ ನನಗೆ ಈ ಜೀವನವೇ ಬೇಕು. ಇದಕ್ಕೆ ಬೆಂಬಲ ಕೊಡುವ ಹುಡುಗ ಬೇಕು. ಮದುವೆ ಆದಮೇಲೆ ಹುಡುಗನಿಗೆ ಇದು ಇಷ್ಟ ಇಲ್ಲ ಅಂದರೆ ಅವನು ಹೋಗಲಿ, ಇರೋದು ಬೇಡ’ ಎಂದಿದ್ದಾರೆ.

ಇನ್ನು, ರಕ್ಷಿತಾ ಶೆಟ್ಟಿ ಅವರ ಈ ಮಾತು ಕೇಳುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಅಲ್ಲದೇ ರಕ್ಷಿತ ಅವರ ಮಾತನ್ನು ಸರಿ ಮಾಡೋದಕ್ಕೆ ಪ್ರಯತ್ನ ಪಟ್ಟರು. ಆದರೆ ರಕ್ಷಿತಾ ಶೆಟ್ಟಿ ಯಾವುದಕ್ಕೂ ಕ್ಯಾರೆ ಎನ್ನದೇ ತನ್ನ ಮಾತನ್ನು ಮುಂದುವರಿಸಿದ್ದು ಪ್ರೊಮೋದಲ್ಲಿ ಕಾಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.