
ಗಿಲ್ಲಿ ನಟ, ರಾಶಿಕಾ
ಚಿತ್ರ: ಜಿಯೋ ಹಾಟ್‌ಸ್ಟಾರ್
‘ಸ್ಟೂಡೆಂಟ್ ಆಫ್ ದಿ ವೀಕ್’ ಪಟ್ಟ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಗ್‌ಬಾಸ್ ಮನೆಯಲ್ಲಿ ರಾಶಿಕಾ ಕಣ್ಣೀರಿಟ್ಟಿದ್ದಾರೆ. ಬಿಗ್‌ಬಾಸ್ ಮನೆ ಬಿ.ಬಿ ಕಾಲೇಜ್ ಆಗಿ ಬದಲಾಗಿದೆ. ಹೀಗಾಗಿ ಸ್ಪರ್ಧಿಗಳು ಬಿ.ಬಿ. ಕಾಲೇಜ್ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ ಸಂಚಿಕೆಯಲ್ಲಿ ನಡೆದ ʻಕಬಡ್ಡಿ ಕಬಡ್ಡಿʼ ಟಾಸ್ಕ್‌ನಲ್ಲಿ ಬ್ಲ್ಯೂ ಹೌಸ್ ಉತ್ತಮ ಪ್ರದರ್ಶನ ನೀಡಿ ಗೆಲವು ಸಾಧಿಸಿತು.
ಬ್ಲ್ಯೂ ಹೌಸ್ ತಂಡ ಗೆಲುವು ಸಾಧಿಸಿದ ಬಳಿಕ ಬಿಗ್‌ಬಾಸ್ ಒಂದು ವಿಶೇಷ ಅವಕಾಶ ನೀಡಿದ್ದರು. ʻತಮ್ಮ ತಂಡದಿಂದ ಒಬ್ಬ ಸದಸ್ಯರನ್ನ ‘ಸ್ಟೂಡೆಂಟ್ ಆಫ್ ದಿ ವೀಕ್’ಗೆ ಆಯ್ಕೆ ಮಾಡಬೇಕು. ತಂಡದ ಸದಸ್ಯರು ಪರಸ್ಪರ ಚರ್ಚಿಸಿ, ಸಹಮತದಿಂದ ನಿರ್ಧರಿಸಬೇಕು ಎಂದರು.
ಆಗ ಬ್ಲ್ಯೂ ಹೌಸ್ ತಂಡದ 6 ಜನ ರಾಶಿಕಾಗೆ ವೋಟ್ ಮಾಡಿದರು. ಗಿಲ್ಲಿ ನಟ ಹಾಗೂ ಸ್ಪಂದನಾ ತಮಗೆ ತಾವೇ ವೋಟ್ ಮಾಡಿಕೊಂಡರು. ಆಗ ಇಡೀ ತಂಡ ಗಿಲ್ಲಿ ಹಾಗೂ ಸ್ಪಂದನಾಗೆ ಮನವೊಲಿಸಲು ಪ್ರಯತ್ನಪಟ್ಟರು ಇಬ್ಬರು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ತಂಡದ ಸಹಮತ ಇಲ್ಲದ ಕಾರಣ ಬಿಗ್‌ಬಾಸ್ ‘ಸ್ಟೂಡೆಂಟ್ ಆಫ್ ದಿ ವೀಕ್’ ಅನ್ನು ರದ್ದು ಮಾಡಿದರು. ಅಷ್ಟು ಟಾಸ್ಕ್‌ನಲ್ಲಿ ಭಾಗಿಯಾದರೂ ಸ್ಟೂಡೆಂಟ್ ಆಫ್ ದಿ ವೀಕ್ ಪಟ್ಟ ಕೈ ತಪ್ಪಿತ್ತಲ್ಲ ಎಂದು ರಾಶಿಕಾ ಕಣ್ಣೀರಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.