ADVERTISEMENT

ಬಿಗ್‌ಬಾಸ್‌ನಲ್ಲಿ ಶುರುವಾಯ್ತು ನಾಮಿನೇಷನ್ ಬಿಸಿ: ರಕ್ಷಿತಾ ಮೇಲೆ ರಾಶಿಕಾ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2025, 5:21 IST
Last Updated 21 ಅಕ್ಟೋಬರ್ 2025, 5:21 IST
<div class="paragraphs"><p> ರಕ್ಷಿತಾ ಶೆಟ್ಟಿ, ರಾಶಿಕಾ </p></div>

ರಕ್ಷಿತಾ ಶೆಟ್ಟಿ, ರಾಶಿಕಾ

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ಸೀಸನ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮನೆಯಿಂದ ಐದು ಸ್ಪರ್ಧಿಗಳು ಹೊರ ಹೋಗಿದ್ದಾರೆ. ಹಾಗೆಯೇ ಭಾನುವಾರದ ಸಂಚಿಕೆಯಲ್ಲಿ ಒಂದೇ ದಿನಕ್ಕೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಪ್ರವೇಶ ಮಾಡಿದ್ದಾರೆ.

ADVERTISEMENT

ರಘು, ರಿಷಾ ಹಾಗೂ ಸೂರಜ್ ಸಿಂಗ್ ಬಿಗ್‌ಬಾಸ್‌ ಮನೆಗೆ ರೆಬೆಲ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸುತ್ತಿದ್ದಂತೆ ಮನೆಯ ವಾತಾವರಣವೇ ಬದಲಾಗಿದೆ. ಇತ್ತೀಚೆಗೆ ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ಗೌಡ ಹಾಗೂ ಜಾಹ್ನವಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು. ಈಗ ರಾಶಿಕಾ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರು ಮನೆಯಲ್ಲಿ ಜಗಳಕ್ಕೆ ಇಳಿದಿದ್ದಾರೆ.

ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ರಾಶಿಕಾ ಹಾಗೂ ರಕ್ಷಿತಾ ನಾಮಿನೇಷನ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ‘ನಿನಗೆ ಏನು ಅರ್ಥ ಆಗೋದಿಲ್ಲ ಈ ಬಿಗ್‌ಬಾಸ್‌ ಮನೆಗೆ ಸುಮ್ಮನೆ ಬಂದಿದ್ದೀಯಾ’ ಎಂದು ರಾಶಿಕಾ ರಕ್ಷಿತಾ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.