ರಿಷಾ ಗೌಡ, ಅಶ್ವಿನಿ ಗೌಡ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಶುರುವಾಗಿ ಮೂರು ವಾರ ಕಳೆದಿದೆ. ಮನೆಮಂದಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಗ್‌ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಕಳೆದ (ಭಾನುವಾರ) ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಗೆ ಒಟ್ಟು ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಆಗಮಿಸಿದ್ದರು.
ಈಗ ಒಬ್ಬೊಬ್ಬರಾಗಿ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ರೆಬೆಲ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಮೊದಲ ಪ್ರೊಮೋದಲ್ಲಿ ರಘು ಅವರು ಬಿಗ್‌ಬಾಸ್ ಮನೆಗೆ ಆಗಮಿಸಿದ್ದರು. ಇದೀಗ ಬಿಡುಗಡೆಯಾದ ಎರಡನೇ ಪ್ರೊಮೋದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಬಿಗ್‌ಬಾಸ್ ಮನೆಗೆ ರಿಷಾ ಗೌಡ ಪ್ರವೇಶ ಮಾಡಿದ್ದಾರೆ.
ಬಿಡುಗಡೆಯಾದ ಎರಡನೇ ಪ್ರೊಮೋದಲ್ಲಿ ಬಿಗ್‌ಬಾಸ್, ‘ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ ರಿಷಾ ನಿಮಗೆ ಸ್ವಾಗತ’ ಎಂದಿದ್ದಾರೆ. ಬಳಿಕ ಮಾತಾಡಿದ ರಿಷಾ, ‘ಧ್ರುವಂತ್ ಅವರ ಸಮಯ ಮುಗಿದಿದೆ. ಕಪಟ ಮುಖವಾಡ ಹಾಕಿಕೊಂಡು ಬದುಕುತ್ತಾ ಇರುವವರು ಸ್ಪಂದನಾ. ಅಶ್ವಿನಿ ಗೌಡ ಹೇಳೋದು ಒಂದು, ಮಾಡೋದು ಇನ್ನೊಂದು. ತೋರಿಸುತ್ತೇನೆ ಬಿಗ್‌ಬಾಸ್ ಆನೆ ನಡೆಯುವ ದಾರಿ ಯಾವಾಗಲೂ ಸರಿಯಾಗಿ ಇರೋದಿಲ್ಲ. ನನ್ನ ಟಾರ್ಗೆಟ್ ಕಾಕ್ರೋಜ್. ತುಂಬಾನೇ ಟಫ್ ಸ್ಪರ್ಧಿ ಅಂತ ಅಂದುಕೊಂಡಿದ್ದೇ. ಆದರೆ ಕಾಕ್ರೋಜ್ ಅನ್ನೋ ಬದಲು ಉತ್ತರಕುಮಾರ ಅಂತ ಹೆಸರನ್ನು ಇಡೋಣ ಅಂದುಕೊಂಡಿದ್ದೇನೆ’ ಎಂದು ಹೇಳುತ್ತಾ ರಿಷಾ ಮನೆಮಂದಿಯ ಭಾವಚಿತ್ರಗಳನ್ನು ಒಡೆದು ಹಾಕಿದ್ದಾರೆ. ಇನ್ನು, ರಿಷಾ ಗೌಡ ಅವರ ಹೇಳಿಕೆಯನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮನೆಮಂದಿ ದಂಗಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.