
ರಿಷಾ ಗೌಡ, ಗಿಲ್ಲಿ ನಟ
ಚಿತ್ರ: ಪ್ರಜಾವಾಣಿ, ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ರಿಷಾ ಗೌಡ ಅವರು 5ನೇ ವಾರಕ್ಕೆ ತಮ್ಮ ಆಟ ಮುಗಿಸಿ ಹೊರಬಂದಿದ್ದಾರೆ. ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿರುವ ರಿಷಾ ಗೌಡ ಅವರು ಗಿಲ್ಲಿ ನಟನ ಬಗ್ಗೆ ಒಂದಷ್ಟು ಮಾಹಿತಿಯನ್ನು ಪ್ರಜಾವಾಣಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಗಿಲ್ಲಿ ನಟನಿಂದಲೇ ಬಿಗ್‌ಬಾಸ್ ನಡೆಯುತ್ತಿದೆ ಎಂದು ಹೇಳಿರುವ ರಿಷಾ ಅವರು, ಈ ವಾರ ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಬಂದವರ ಜೊತೆಗೆ ಗಿಲ್ಲಿ ನಡೆದುಕೊಂಡ ರೀತಿಯ ಬಗ್ಗೆ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಿಷಾ ಗೌಡ, ‘ಅಭಿಮಾನಿಗಳ ಪ್ರಕಾರ ಗಿಲ್ಲಿ ಹುಲಿಯಾಗಿದ್ದಾನೆ. ನನ್ನ ಪ್ರಕಾರ ಬಿಗ್‌ಬಾಸ್ ನಡೆಯುತ್ತಿರುವುದೇ ಗಿಲ್ಲಿಯಿಂದ. ಗಿಲ್ಲಿ ಬಿಟ್ಟರೆ ಬಿಗ್‌ಬಾಸ್ ಮನೆಯಲ್ಲಿ ಏನು ಕಾಣಿಸುತ್ತಿಲ್ಲ. ಈ ಸೀಸನ್‌ನಲ್ಲಿ ಗಿಲ್ಲಿ ಇಲ್ಲ ಅಂದರೆ ಬಿಗ್‌ಬಾಸ್ ಇಲ್ಲ. ನಾನು ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಗಿಲ್ಲಿ ಜೊತೆಗೆ ಗಲಾಟೆ ಮಾಡಿಕೊಂಡಾಗ ಕೊಂಚ ಬೇಸರ ಆಗಿತ್ತು. ಆದರೆ ಗಿಲ್ಲಿ ಜೊತೆಗೆ ಖುಷಿಯಿಂದ ಕಳೆದ ಕ್ಷಣಗಳನ್ನು ಮರಿಯೋದಕ್ಕೆ ಆಗಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.