ADVERTISEMENT

ಬಿಗ್‌ಬಾಸ್‌ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 10:57 IST
Last Updated 19 ಜನವರಿ 2026, 10:57 IST
<div class="paragraphs"><p>ರಕ್ಷಿತಾ ಶೆಟ್ಟಿ, ಕಿಚ್ಚ ಸುದೀಪ್&nbsp;</p></div>

ರಕ್ಷಿತಾ ಶೆಟ್ಟಿ, ಕಿಚ್ಚ ಸುದೀಪ್ 

   

ಚಿತ್ರ: ಜಿಯೋ ಹಾಟ್‌ಸ್ಟಾರ್

ಬಿಗ್​​ಬಾಸ್ ಕನ್ನಡ ಸೀಸನ್ 12 ಅಂತ್ಯವಾಗಿದೆ. ಬರೋಬ್ಬರಿ 113 ದಿನಗಳ ಕಾಲ ನಡೆದ ಈ ಬಿಗ್‌ಬಾಸ್‌ ಶೋನ ವಿಜೇತರಾಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. 47 ಕೋಟಿಗೂ ಅಧಿಕ ವೋಟುಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ADVERTISEMENT

ಗಿಲ್ಲಿ ನಟ, ಕಿಚ್ಚ ಸುದೀಪ್ 

ಬಿಗ್​​ಬಾಸ್ ಶುರುವಾದ ಮೊದಲ ದಿನವೇ ಶೋನಿಂದ ಹೊರಗೆ ಬಂದಿದ್ದ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಸಾಮಾನ್ಯವಾಗಿ ಬಿಗ್​​ಬಾಸ್​​ನಲ್ಲಿ ಗೆದ್ದವರಿಗೆ ₹50 ಲಕ್ಷವನ್ನು ಬಹುಮಾನದ ರೂಪದಲ್ಲಿ ನೀಡುವುದು ವಾಡಿಕೆ. ಅದರ ಜೊತೆಗೆ ಗೆದ್ದವರಿಗೆ ಕಾರನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತಿದೆ. ಇದೀಗ ಈ ಸೀಸನ್​​ನಲ್ಲಿ ರನ್ನರ್ ಅಪ್ ಆದ ರಕ್ಷಿತಾ ಅವರಿಗೂ ಸಹ ದೊಡ್ಡ ಮೊತ್ತವೇ ಬಹುಮಾನವಾಗಿ ಸಿಕ್ಕಿದೆ.

ರಕ್ಷಿತಾ ಶೆಟ್ಟಿ ಅವರಿಗೆ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ₹20 ಲಕ್ಷ ನಗದು ಬಹುಮಾನ ನೀಡಲಾಗಿದೆ. ಖುದ್ದು ಟಿ.ಎ. ಶರವಣ ಅವರು ವೇದಿಕೆಗೆ ತೆರಳಿ ರಕ್ಷಿತಾ ಅವರಿಗೆ ₹20 ಲಕ್ಷ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ. ಅದಾದ ಬಳಿಕ ಜಾರ್ ಅಪ್ಲಿಕೇಶನ್​​ನ ವತಿಯಿಂದ ರಕ್ಷಿತಾ ಅವರಿಗೆ 5₹ ಲಕ್ಷ ನಗದು ಹಣವನ್ನು ಉಡುಗೊರೆಯಾಗಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.