
ಅಶ್ವಿನಿ ಗೌಡ, ಗಿಲ್ಲಿ, ಕಾವ್ಯ, ರಘು
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ 59ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಸಮಯದಲ್ಲಿ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ಘಟಾನುಘಟಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ 7 ಸ್ಪರ್ಧಿಗಳಲ್ಲಿ ಭಾನುವಾರದ ಸಂಚಿಕೆಯಲ್ಲಿ ಒಬ್ಬರು ಹೊರ ಹೋಗುವುದು ಖಚಿತವಾಗಿದೆ.
ಕಳೆದ ವಾರ ಬಿಗ್‌ಬಾಸ್ ಮನೆಯಿಂದ ರಿಷಾ ಗೌಡ ಅವರು ಎಲಿಮಿನೇಟ್ ಆದರು. ಈ ವಾರದ ನಾಮಿನೇಷನ್‌ನಲ್ಲಿ ಧ್ರುವಂತ್, ಅಶ್ವಿನಿ ಗೌಡ, ಜಾಹ್ನವಿ, ಮಾಳು ನಿಪನಾಳ, ಕಾವ್ಯ, ಗಿಲ್ಲಿ ನಟ ಹಾಗೂ ರಘು ಅವರು ನಾಮಿನೇಟ್ ಆಗಿದ್ದಾರೆ.
ಮನೆಮಂದಿ ಹಲವು ಕಾರಣಗಳನ್ನು ನೀಡಿ ಒಟ್ಟು 7 ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿದೆ. ಈ 7 ಘಟಾನುಘಟಿಗಳ ಪೈಕಿ ವಾರದ ಕೊನೆಯಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.
ಸದ್ಯ ಈ ವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ವಿಶೇಷವಾದ ಟಾಸ್ಕ್ ನೀಡಿದ್ದಾರೆ. ಬಿಗ್‌ಬಾಸ್ ಮನೆ ಈಗ ಬಿಬಿ ಪ್ಯಾಲೇಸ್ ಹೋಟೆಲ್ ಆಗಿ ಬದಲಾಗಿದೆ. ಈ ನಿಟ್ಟಿನಲ್ಲಿ ಬಿಗ್‌ಬಾಸ್ ಮನೆಗೆ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಉಗ್ರಂ ಮಂಜು ಮತ್ತು ರಜತ್ ಅವರು ಅತಿಥಿಗಳಾಗಿ ಬಂದಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು 12ನೇ ಸೀಸನ್ ಸ್ಪರ್ಧಿಗಳಿಗೆ ಬಿಡಲಾಗಿದೆ. ಯಾರು ಮನೆಗೆ ಬಂದ ಅತಿಥಿಗೆ ಸತ್ಕಾರ ಮಾಡುತ್ತಾರೋ ಅವರಿಗೆ ಕ್ಯಾಪ್ಟನ್ಸಿ ಓಟದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.