ADVERTISEMENT

ಬಿಗ್ ಬಾಸ್ ಕನ್ನಡ ಸೀಸನ್-9: ರೂಪೇಶ್ ಶೆಟ್ಟಿ ವಿನ್ನರ್

ಒಟಿಟಿ ಮತ್ತು ಸೀಸನ್ 9 ಎರಡರಲ್ಲೂ ಗೆದ್ದು ದಾಖಲೆ ಬರೆದ ರೂಪೇಶ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 14:43 IST
Last Updated 1 ಜನವರಿ 2023, 14:43 IST
ಒಟಿಟಿ ಮತ್ತು ಸೀಸನ್ 9 ಎರಡರಲ್ಲೂ ಗೆದ್ದು ದಾಖಲೆ ಬರೆದ ರೂಪೇಶ್ ಶೆಟ್ಟಿ
ಒಟಿಟಿ ಮತ್ತು ಸೀಸನ್ 9 ಎರಡರಲ್ಲೂ ಗೆದ್ದು ದಾಖಲೆ ಬರೆದ ರೂಪೇಶ್ ಶೆಟ್ಟಿ   

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-9ರಲ್ಲಿ ರೂಪೇಶ್ ಶೆಟ್ಟಿ ಜಯಶಾಲಿಯಾಗಿದ್ದಾರೆ. ತುಳು ಸಿನಿಮಾ ಮೂಲಕ ಗಮನ ಸೆಳೆದಿದ್ದ ಶೆಟ್ಟಿ, ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್ನಿನಲ್ಲೂ ಗೆದ್ದಿದ್ದರು. ಈ ಮೂಲಕ ಅವರು ಹೊಸದಾಖಲೆ ಬರೆದಿದ್ದಾರೆ.

ಬಿಗ್ ಬಾಸ್ ಸೀಸನ್ 9ರಲ್ಲಿ ₹60 ಲಕ್ಷ ಮತ್ತು ಒಟಿಟಿಯಲ್ಲಿ ₹5 ಲಕ್ಷ ಗೆದ್ದಿದ್ದಾರೆ.

ಮೊದಲ ರನ್ನರ್ ಅಪ್ ಆಗಿ ರಾಕೇಶ್ ಅಡಿಗ(₹12 ಲಕ್ಷ), ಎರಡನೇ ರನ್ನರ್ ಅಪ್ ದೀಪಿಕಾ ದಾಸ್(₹3 ಲಕ್ಷ), ರೂಪೇಶ್ ರಾಜಣ್ಣ ಮೂರನೇ ರನ್ನರ್ ಅಪ್(₹3ಲಕ್ಷ), ದಿವ್ಯಾ ಉರುಡುಗ ನಾಲ್ಕನೇ ರನ್ನರ್ ಅಪ್(₹2 ಲಕ್ಷ) ಆಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.