ADVERTISEMENT

ಒಳ್ಳೆಯವನ ನಾಟಕ ಇವಾಗ ತೋರಿಸ್ತೀನಿ: ಏಕಾಏಕಿ ಸ್ಪಂದನಾ ಮೇಲೆ ಕೂಗಾಡಿದ ಧ್ರುವಂತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2025, 5:27 IST
Last Updated 13 ಅಕ್ಟೋಬರ್ 2025, 5:27 IST
<div class="paragraphs"><p>ಧ್ರುವಂತ್ ಹಾಗೂ&nbsp;ಸ್ಪಂದನಾ</p></div>

ಧ್ರುವಂತ್ ಹಾಗೂ ಸ್ಪಂದನಾ

   

ಚಿತ್ರ: ಕಲರ್ಸ್‌ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಶುರುವಾಗಿ ಎರಡು ವಾರ ಮುಕ್ತಾಯಗೊಂಡಿದೆ. ಬಿಗ್‌ಬಾಸ್‌ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಸ್ಪರ್ಧಿಗಳ ನಡುವಿನ ಕಲಹ ಜೋರಾಗಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಧ್ರುವಂತ್ ಏಕಾಏಕಿ ಸ್ಪಂದನಾ ಮೇಲೆ ತಿರುಗಿ ಬಿದ್ದಿದ್ದಾರೆ.

ADVERTISEMENT

ಕಲರ್ಸ್ ಕನ್ನಡ ಹೊಸ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ರಿಲೀಸ್‌ ಆಗಿರೋ ಪ್ರೊಮೋದಲ್ಲಿ ಧ್ರುವಂತ್ ಹಾಗೂ ಸ್ಪಂದನಾ ನಡುವೆ ಜೋರು ಗಲಾಟೆ ನಡೆದಿದೆ.

ಪ್ರೊಮೋದಲ್ಲಿ ಏನಿದೆ?

ಧ್ರುವಂತ್ ಸೇರಿದಂತೆ ಮನೆಮಂದಿ ಅಡುಗೆ ಮನೆಯಲ್ಲಿದ್ದರು. ಆಗ ಧ್ರುವಂತ್ ಮಾಳು ನಿಪನಾಳಗೆ ಕುರ್ಚಿ ಅಲ್ಲಿ ಇದೆ ಆ ಕಡೆ ಇಡಬೇಕು ಎಂದರು. ಆಗ ಧ್ರುವಂತ್‌ಗೆ ಸ್ಪಂದನಾ ಯಾವ ಕುರ್ಚಿ ಹೇಳಿ ಅಂತಾರೆ. ಆ ಕೂಡಲೇ ಸಿಟ್ಟಿಗೆದ್ದ ಧ್ರುವಂತ್, ನಾನು ಇನ್ನೊಂದು ಸರಿ ಹೇಳೋದಿಲ್ಲ. ಮೇಕಪ್ ಮಾಡಿಕೊಂಡು ಸುಮ್ಮನೆ ಓಡಾಡೋದಲ್ಲ. ನಾನು ಇನ್ನು ಮೇಲೆ ಬರ್ತಿನಿ ನೋಡಿಕೊಳ್ಳಿ. ಒಳ್ಳೆಯವನ ತರ ನಾಟಕ ಮಾಡ್ತೀನಿ ಅಂತೀರಲ್ಲ. ಇವಾಗ ಒಳ್ಳೆಯವನ ನಾಟಕ ತೋರಿಸ್ತೀನಿ ಎಂದು ರೇಗಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.