ಸೂರಜ್ ಸಿಂಗ್
ಚಿತ್ರ: ಕಲರ್ಸ್ ಕನ್ನಡ /ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ 12ನೇ ಸೀಸನ್ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಇರುವವರಿಗೆ ಹುಮ್ಮಸ್ಸು ತುಂಬಲು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿದ್ದು, ಅಸಲಿ ಆಟ ಈಗ ಶುರುವಾಗಿದೆ. ಈಗಾಗಲೇ ಬಿಗ್‌ಬಾಸ್ ಮನೆ ಮೂರು ತಂಡವಾಗಿ ಬದಲಾಗಿದೆ. ಅದರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ನಾಯಕತ್ವ ವಹಿಸಲಾಗಿದೆ. ಆದರೆ ಈಗ ಸೂರಜ್ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ತ್ಯಾಗ ಮಾಡಿ ನಿಜವಾದ ಹೀರೊ ಆಗಿದ್ದಾರೆ.
ಸೂರಜ್ ಸಿಂಗ್, ಬಿಗ್‌ಬಾಸ್ ಸ್ಪರ್ಧಿಗಳು
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ಬಾಸ್, ‘ಈ ಪವರ್ ಕಾರ್ಡ್ ಅನ್ನು ನೀವು ತೆಗೆದುಕೊಂಡರೇ ನೇರವಾಗಿ ಕ್ಯಾಪ್ಟನ್ಸಿ ಅಭ್ಯರ್ಥಿ ಆಗುತ್ತೀರಿ. ಆದರೆ ನಿಮ್ಮ ತಂಡ ಕ್ಯಾಪ್ಟನ್ಸಿ ಓಟದಿಂದ ಹೊರಗೆ ಉಳಿಯುತ್ತದೆ ಎಂದರು. ರಘು ಪವರ್ ಕಾರ್ಡ್ ತೆಗೆದಕೊಂಡು. ಹಾಗೇ ರಿಷಾ ಕೂಡ ಪವರ್ ಕಾರ್ಡ್ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ಆಗ ಸೂರಜ್ ನಾನು ಇದನ್ನು ತೆಗೆದುಕೊಳ್ಳುವುದಿಲ್ಲ. ನನ್ನ ತಂಡ ಗೆದ್ದರೆ ನಾನು ಮುಂದುವರೆಯುತ್ತೇನೆ ಎಂದರು. ಸೂರಜ್ ಸಿಂಗ್ ಕ್ಯಾಪ್ಟನ್ಸಿ ಆಟವನ್ನು ತ್ಯಾಗ ಮಾಡಿದ್ದಕ್ಕೆ ಇಡೀ ತಂಡ ಬಹುಪರಾಕ್ ಎಂದಿದೆ.
ಬಿಗ್‌ಬಾಸ್ ಮೂರು ತಂಡದ ನಾಯಕರಿಗೆ ಅವಕಾಶ ಒಂದನ್ನು ಕೊಟ್ಟಿದ್ದರು. ತಮ್ಮ ತಂಡ ಗೆಲ್ಲಲಿ ಅಥವಾ ಸೋಲಲಿ. ತಂಡದ ನಾಯಕನಾಗಿದ್ದವರಿಗೆ ನೇರವಾಗಿ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗುವ ಅವಕಾಶವನ್ನು ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದರೇ ತಂಡದ ಉಳಿದ ಸದಸ್ಯರು ಕ್ಯಾಪ್ಟನ್ಸಿ ರೇಸ್ನಿಂದ ಹಿಂದೆ ಸರಿಯಬೇಕಾಗುತ್ತದೆ ಎಂದರು. ಆಗ ರಘು ಹಾಗೂ ರಿಷಾ ಪವರ್ ಕಾರ್ಡ್ ತೆಗೆದುಕೊಳ್ಳುತ್ತೇನೆ ಎಂದರು. ಇದಾದ ಬಳಿಕ ರಘು ಹಾಗೂ ರಿಷಾ ತಂಡ ಇಬ್ಬರ ಜೊತೆಗೆ ಮನೆಮಂದಿ ಗಲಾಟೆ ಮಾಡಿಕೊಂಡಿದ್ದಾರೆ. ನಿಮ್ಮ ಸ್ವಾರ್ಥಕ್ಕಾಗಿ ನಮಗೆಲ್ಲಾ ಏನು ಸಿಕ್ತು ಎಂದು ಕೆಂಡಕಾರಿದ್ದಾರೆ. ಇನ್ನು, ಬಿಗ್‌ಬಾಸ್ ಮನೆಯಲ್ಲಿ ಯಾರೂ ಕೂಡ ಟಾಸ್ಕ್‌ಗಳನ್ನು ತ್ಯಾಗ ಮಾಡೋದಕ್ಕೆ ತಯಾರಿರೋದಿಲ್ಲ. ಆದರೆ ಸೂರಜ್, ‘ನನ್ನ ತಂಡದ ಜೊತೆಗೆ ನಾನು ಹೋಗುತ್ತೇನೆ. ನನಗೆ ಈ ಪವರ್ ಬೇಡ’ ಎಂದು ಹೇಳುವ ಮೂಲಕ ನಿಜವಾದ ಹೀರೊ ಎಂದು ಎನಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.