ಬಿಗ್‌ಬಾಸ್ ಸ್ಪರ್ಧಿಗಳು
ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಎಂದಿನಂತೆ ಮತ್ತೆ ಶುರುವಾಗಿದೆ. ಎರಡು ದಿನ ಸಂಪೂರ್ಣವಾಗಿ ಖಾಲಿಯಾಗಿದ್ದ ಮನೆ ಈಗ ಸ್ಪರ್ಧಿಗಳಿಂದ ಭರ್ತಿಯಾಗಿದೆ.
ಈಗ ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಇನ್ನೊಂದು ಪ್ರೊಮೋ ಬಿಡುಗಡೆ ಮಾಡಿದೆ. ರಿಲೀಸ್ ಆಗಿರುವ ಪ್ರೊಮೋದಲ್ಲಿ ಬಿಗ್‌ಬಾಸ್ ಹೊಸ ಹುರುಪಿನೊಂದಿಗೆ ಸ್ಪರ್ಧಿಗಳನ್ನು ಮನೆ ಒಳಗಡೆ ಬರಮಾಡಿಕೊಂಡಿದ್ದಾರೆ.
ಬಿಗ್‌ಬಾಸ್ ಹೊಸ ಪ್ರೊಮೋದಲ್ಲಿ ಏನಿದೆ?
‘ಇದು ಬಿಗ್‌ಬಾಸ್ ಮನೆ ಮಾತ್ರವಲ್ಲ, ನಮ್ಮ ಕನ್ನಡಿಗರ ಹೆಮ್ಮೆ. ಕನ್ನಡಿಗರೆಲ್ಲಾ ಹಚ್ಚಿ ಸಂಭ್ರಮಿಸೋ ಈ ಜ್ಯೋತಿ ಆರಲು ಅಸಾಧ್ಯ. ನಿಮ್ಮ ಆಟಕ್ಕೆ ನೀಡಿದ್ದ ಅಲ್ಪ ವಿರಾಮ ಮುಗಿದಿದೆ. ಹೊಸ ಹುರುಪು ಹಾಗೂ ಇನ್ನಷ್ಟು ಛಲದೊಂದಿಗೆ ಆಟವನ್ನು ಮುಂದುವರೆಸಿ’ ಎಂದಿದ್ದಾರೆ.
ಬಿಗ್‌ಬಾಸ್ ಧ್ವನಿ ಕೇಳುತ್ತಿದ್ದಂತೆ ಮನೆಮಂದಿ ಮುಖದಲ್ಲಿ ನಗು ಮೂಡಿದೆ. ಹೊಸ ಹುರುಪಿನೊಂದಿಗೆ ಬಿಗ್‌ಬಾಸ್ ಮನೆ ಒಳಗಡೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.
ಅಸಲಿಗೆ ಏನಾಗಿತ್ತು?
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಮಂಡಳಿಯು ಜಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಪೊಲೀಸ್ ಭದ್ರತೆಯಲ್ಲಿ ಜಾಲಿವುಡ್‌ಗೆ ಬೀಗ ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.