
ಮಾಳು ನಿಪನಾಳ
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಮನೆಯೊಳಗೆ ವೀಕ್ಷಕರು ಆಗಮಿಸಿದ್ದಾರೆ. ಕಾವ್ಯ, ರಘು, ಮಾಳು ನಿಪನಾಳ, ಜಾಹ್ನವಿ, ರಿಷಾ ಗೌಡ ಹಾಗೂ ಅಭಿಷೇಕ್ ನಡುವೆ ಕ್ಯಾಪ್ಟನ್ಸಿ ಪೈಪೋಟಿ ನಡೆಯಲಿದೆ. ವಿಶೇಷ ಏನೆಂದರೆ ಈ 6 ಸ್ಪರ್ಧಿಗಳಲ್ಲಿ ಈ ವಾರದ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬುದನ್ನು ವೀಕ್ಷಕರು ನಿರ್ಧಾರ ಮಾಡಲಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪ್ರೊಮೋದಲ್ಲಿ ಮನೆಗೆ ವೀಕ್ಷಕರು ಪ್ರವೇಶಿಸುವ ಅವಕಾಶವನ್ನು ಬಿಗ್‌ಬಾಸ್ ಕಲ್ಪಿಸಿಕೊಟ್ಟಿದ್ದಾರೆ. ಅದರಲ್ಲಿ ಬಿಗ್‌ಬಾಸ್, ‘ನಿಮ್ಮನ್ನು ಪ್ರೀತಿಸುವ ವೀಕ್ಷಕರು ಈ ಮನೆಗೆ ಆಗಮಿಸಲಿದ್ದಾರೆ. ವೀಕ್ಷಕರ ಮನಸ್ಸನ್ನು ಯಶಸ್ವಿಯಾಗಿ ಗೆಲ್ಲುವ ಒಬ್ಬರು ಮನೆಯ ಮುಂದಿನ ಕ್ಯಾಪ್ಟನ್ ಆಗಿ ಆಯ್ಕೆಯಾಗಲಿದ್ದಾರೆ’ ಎಂದು ಘೋಷಿಸಿದ್ದಾರೆ.
ಇನ್ನು, ಬಿಗ್‌ಬಾಸ್ ಮನೆಗೆ ಕ್ಯಾಪ್ಟನ್ ಆಯ್ಕೆ ಮಾಡಲು ಬಂದ ವೀಕ್ಷಕರು ಮಾಳು ನಿಪನಾಳ ಮಾತನ್ನು ಕೇಳಿ ದಂಗಾಗಿದ್ದಾರೆ. ವೋಟ್ ಹಾಕಲು ಬಿಗ್‌ಬಾಸ್ ಮನೆಗೆ ಬಂದ ವೀಕ್ಷಕರ ಮುಂದೆ ಮಾಳು ನಿಪನಾಳ ಮನಬಿಚ್ಚಿ ಮಾತನಾಡಿದ್ದಾರೆ. ‘ಬಂದ ದಿನದಿಂದ ಮಾಳು ಸ್ಟ್ಯಾಂಡ್ ತೆಗೆದುಕೊಳ್ಳುವುದಿಲ್ಲ ಅಂತಾರೆ. ಇಲ್ಲಿ ಯಾವ ವಿಚಾರಕ್ಕೆ ಜಗಳ ಮಾಡುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಜಗಳದ ಬಗ್ಗೆ ಸ್ಟ್ಯಾಂಡ್ ತೆಗೆದುಕೊಳ್ಳಲು ಹೋದವರು ಹುಚ್ಚರಾಗುತ್ತಾರೆ. ಈ ಕ್ಯಾಪ್ಟನ್ಸಿ ಮಾಡೇ ಮಾಡ್ತೀನಿ. ಇದರಲ್ಲಿ ಹಳ್ಳಿ ಹುಡುಗನ ಗತ್ತು ತೋರಿಸುತ್ತೇನೆ’ ಎಂದಿದ್ದಾರೆ. ಮಾಳು ಅವರ ಮಾತು ಕೇಳುತ್ತಿದ್ದಂತೆ ಮನೆಗೆ ಬಂದ ವೀಕ್ಷಕರು ಜೋರಾಗಿ ‘ಮಾಳು.. ಮಾಳು ಎಂದು ಕೂಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.