
ಪ್ರಜಾವಾಣಿ ವಾರ್ತೆಕನ್ನಡ ಬಿಗ್‌ಬಾಸ್ 12ನೇ ಸೀಸನ್‌ನ ವಿಜೇತ ಮಳವಳ್ಳಿಯ ಗಿಲ್ಲಿ ನಟ ಅವರನ್ನು ಸೋಮವಾರ ಅವರ ಅಭಿಮಾನಿಗಳು ಮತ್ತು ಸ್ವಂತ ಜಿಲ್ಲೆ ಮಂಡ್ಯದ ಜನರು ಆತ್ಮೀಯವಾಗಿ ಸ್ವಾಗತಿಸಿದರು. ಮಳವಳ್ಳಿ ಪಟ್ಟಣ, ಹುಟ್ಟೂರು ದಡದಪುರ ಮತ್ತು ಬಂಡೂರಿನ ಜನ ತಮ್ಮೂರಿನ ಪ್ರತಿಭೆಯನ್ನು ಸಂಭ್ರಮದಿಂದ ಬರಮಾಡಿಕೊಂಡರು. ಇನ್ನು, ಗಿಲ್ಲಿ ನಟ ಬಿಗ್‌ಬಾಸ್ ಗೆದ್ದಿರುವ ನಿಮಿತ್ತ, ದೊಡ್ಡಅರಸಿನಕೆರೆ ಗೇಟ್ ಬಳಿಯ ₹5 ರೂ ಇಡ್ಲಿಗೆ ಪ್ರಸಿದ್ಧಿಯಾದ ಗವಿ ಹೋಟೆಲ್‌ನಲ್ಲಿ, ಎಲ್ಲರಿಗೂ ಉಚಿತ ಉಪಾಹಾರ, ಊಟ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.