ADVERTISEMENT

ವಿಜಯ್‌ ರಾಘವೇಂದ್ರರಿಂದ ಗಿಲ್ಲಿವರೆಗೆ: ಬಿಗ್‌ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 11:11 IST
Last Updated 19 ಜನವರಿ 2026, 11:11 IST
<div class="paragraphs"><p>ಕನ್ನಡ&nbsp;ಬಿಗ್‌ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು</p></div>

ಕನ್ನಡ ಬಿಗ್‌ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು

   

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌ 2013ರಲ್ಲಿ ಆರಂಭಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಕಾರ್ಯಕ್ರಮ ಎನಿಸಿಕೊಂಡಿದೆ. ವಿಶೇಷ ಏನೆಂದರೆ ಸೀಸನ್ 1ರಿಂದ 12ರವರೆಗೂ ಯಶಸ್ವಿಯಾಗಿ ನಟ ಸುದೀಪ್‌ ಅವರು ಬಿಗ್‌ಬಾಸ್‌ ನಿರೂಪಣೆ ಮಾಡಿದ್ದಾರೆ.

ಸದ್ಯ ನಿನ್ನೆಯಷ್ಟೇ (ಜ.18) ಬಿಗ್‌ಬಾಸ್‌ನ 12ನೇ ಆವೃತ್ತಿ ಅಂತ್ಯ ಕಂಡಿದೆ. ಈಗಾಗಲೇ ಬಿಗ್‌ಬಾಸ್‌ ಸೀಸನ್ 12ರ ವಿಜೇತರಾಗಿ ಗಿಲ್ಲಿ ನಟ ಹೊರ ಹಮ್ಮಿದ್ದಾರೆ. ರನ್ನರ್ ಅಪ್‌ ಪಟ್ಟವನ್ನು ರಕ್ಷಿತಾ ಶೆಟ್ಟಿ ಅಲಂಕರಿಸಿದ್ದಾರೆ. ಬಿಗ್‌ಬಾಸ್‌ 1ನೇ ಆವೃತ್ತಿಯಿಂದ 12ರವರೆಗೆ ವಿಜೇತರಾದವರ ಸಂಪೂರ್ಣ ಪಟ್ಟಿ ಇಲ್ಲಿದೆ.

ADVERTISEMENT

ನಟ ವಿಜಯ್ ರಾಘವೇಂದ್ರ, ಸುದೀಪ್, ನಟ ಅರುಣ್ ಸಾಗರ್

BBK1– ವರ್ಷ: 2013

ವಿನ್ನರ್‌: ನಟ ವಿಜಯ್ ರಾಘವೇಂದ್ರ

ರನ್ನರ್‌: ನಟ ಅರುಣ್ ಸಾಗರ್

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 1ನೇ ಆವೃತ್ತಿಯಲ್ಲಿ ಸ್ಯಾಂಡಲ್‌ವುಡ್‌ ನಟ ವಿಜಯ್ ರಾಘವೇಂದ್ರ ವಿಜೇತರಾಗಿದ್ದರು. ಇವರ ಜತೆಗೆ ನಟ ಅರುಣ್ ಸಾಗರ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

ನಿರೂಪಕ ಸೃಜನ್ ಲೋಕೇಶ್, ಸುದೀಪ್, ನಿರೂಪಕ ಅಕುಲ್ ಬಾಲಾಜಿ

BBK 2– ವರ್ಷ: 2014

ವಿನ್ನರ್‌: ನಿರೂಪಕ ಅಕುಲ್ ಬಾಲಾಜಿ

ರನ್ನರ್‌: ನಟ, ನಿರೂಪಕ ಸೃಜನ್ ಲೋಕೇಶ್

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 2ನೇ ಆವೃತ್ತಿಯಲ್ಲಿ ನಿರೂಪಕ ಅಕುಲ್ ಬಾಲಾಜಿ ವಿಜೇತರಾಗಿದ್ದರು. ನಟ, ನಿರೂಪಕ ಸೃಜನ್ ಲೋಕೇಶ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

ನಟ ಚಂದನ್ ಕುಮಾರ್‌, ಸುದೀಪ್, ಹಿರಿಯ ನಟಿ ಶ್ರುತಿ

BBK 3– ವರ್ಷ: 2015

ವಿನ್ನರ್‌: ಹಿರಿಯ ನಟಿ ಶ್ರುತಿ

ರನ್ನರ್‌: ನಟ ಚಂದನ್ ಕುಮಾರ್‌

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 3ನೇ ಆವೃತ್ತಿಯಲ್ಲಿ ಕನ್ನಡ ಹಿರಿಯ ನಟಿ ಶ್ರುತಿ ಅವರು ವಿಜಯಶಾಲಿಯಾಗಿದ್ದರು. ರನ್ನರ್‌ ಅಪ್‌ ಪಟ್ಟವನ್ನು ನಟ ಚಂದನ್ ಕುಮಾರ್‌ ಗಿಟ್ಟಿಸಿಕೊಂಡಿದ್ದರು.

ಕಿರಿಕ್ ಕೀರ್ತಿ, ಸುದೀಪ್, ಪ್ರಥಮ್

BBK 4– ವರ್ಷ: 2016

ವಿನ್ನರ್‌: ‘ಒಳ್ಳೆ ಹುಡುಗ‘ ಪ್ರಥಮ್

ರನ್ನರ್‌: ಕಿರಿಕ್ ಕೀರ್ತಿ

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 4ನೇ ಆವೃತ್ತಿಯಲ್ಲಿ ಒಳ್ಳೆ ಹುಡುಗ ಪ್ರಥಮ್ ಗೆದ್ದಿದ್ದರು. ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದರು.

ಗಾಯಕ, ನಟ ಚಂದನ್ ಶೆಟ್ಟಿ, ಸುದೀಪ್, ದಿವಾಕರ್

BBK 5– ವರ್ಷ: 2017

ವಿನ್ನರ್‌: ಗಾಯಕ, ನಟ ಚಂದನ್ ಶೆಟ್ಟಿ

ರನ್ನರ್‌: ದಿವಾಕರ್

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 5ನೇ ಆವೃತ್ತಿಯಲ್ಲಿ ಖ್ಯಾತ ಗಾಯಕ, ನಟ ಚಂದನ್ ಶೆಟ್ಟಿ ವಿನ್ನರ್ ಆಗಿದ್ದರು. ರನ್ನರ್‌ ಅಪ್‌ ಆಗಿ ದಿವಾಕರ್ ಹೊರ ಹೊಮ್ಮಿದ್ದರು.

ರೈತ ಶಶಿಕುಮಾರ್, ಸುದೀಪ್, ಗಾಯಕ ನವೀನ್ ಸಜ್ಜು

BBK6– ವರ್ಷ: 2018

ವಿನ್ನರ್‌: ರೈತ ಶಶಿಕುಮಾರ್

ರನ್ನರ್‌: ಗಾಯಕ ನವೀನ್ ಸಜ್ಜು

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 6ನೇ ಆವೃತ್ತಿಯಲ್ಲಿ ರೈತ ಶಶಿಕುಮಾರ್ ವಿಜೇತರಾಗಿದ್ದರು. ಗಾಯಕ ನವೀನ್ ಸಜ್ಜು ರನ್ನರ್ ಅಪ್ ಆಗಿದ್ದರು.

ಹಾಸ್ಯ ನಟ ಕುರಿ ಪ್ರತಾಪ್, ಸುದೀಪ್, ಶೈನ್ ಶೆಟ್ಟಿ

BBK7– ವರ್ಷ: 2019

ವಿನ್ನರ್‌: ಶೈನ್ ಶೆಟ್ಟಿ

ರನ್ನರ್‌: ಹಾಸ್ಯ ನಟ ಕುರಿ ಪ್ರತಾಪ್

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 7ನೇ ಆವೃತ್ತಿಯಲ್ಲಿ ಕನ್ನಡ ಕಿರುತೆರೆ ನಟ ಶೈನ್ ಶೆಟ್ಟಿ ಗೆಲುವು ಸಾಧಿಸಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

ಮಂಜು ಪಾವಗಡ, ಸುದೀಪ್, ಅರವಿಂದ್ ಕೆಪಿ

BBK 8– ವರ್ಷ: 2020

ವಿನ್ನರ್‌: ಮಂಜು ಪಾವಗಡ

ರನ್ನರ್‌: ಅರವಿಂದ್ ಕೆ.ಪಿ

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ 8ನೇ ಆವೃತ್ತಿಯಲ್ಲಿ ಮಜಾಭಾರತ ಖ್ಯಾತಿಯ ಮಂಜು ಪಾವಗಡ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಅರವಿಂದ್ ಕೆ.ಪಿ ಅವರು ರನ್ನರ್ ಅಪ್ ಆಗಿದ್ದರು. ‌

ರೂಪೇಶ್ ಶೆಟ್ಟಿ, ಸುದೀಪ್, ರಾಕೇಶ್ ಅಡಿಗ

BBK9– ವರ್ಷ: 2022

ವಿನ್ನರ್‌: ರೂಪೇಶ್ ಶೆಟ್ಟಿ

ರನ್ನರ್‌: ನಟ ರಾಕೇಶ್ ಅಡಿಗ

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್ ಒಟಿಟಿ 1ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ನಟ ರೂಪೇಶ್ ಶೆಟ್ಟಿ ವಿನ್ನರ್‌ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಸೀಸನ್ 9ಕ್ಕೆ ಆಯ್ಕೆಯಾಗಿದ್ದರು. ಬಿಗ್‌ಬಾಸ್ ಸೀಸನ್ 9ರಲ್ಲೂ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ನಟ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದರು.

ಡ್ರೋನ್ ಪ್ರತಾಪ್, ಸುದೀಪ್, ಕಾರ್ತಿಕ್ ಮಹೇಶ್

BBK10– ವರ್ಷ: 2023

ವಿನ್ನರ್‌: ಕಾರ್ತಿಕ್ ಮಹೇಶ್

ರನ್ನರ್‌: ಡ್ರೋನ್ ಪ್ರತಾಪ್

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌‌ 10ನೇ ಆವೃತ್ತಿಯಲ್ಲಿ ನಟ ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದ್ದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು.

ಹನುಮಂತ ಲಮಾಣಿ, ಸುದೀಪ್, ನಟ ತ್ರಿವಿಕ್ರಮ್

BBK11– ವರ್ಷ: 2024–25

ವಿನ್ನರ್‌: ಹನುಮಂತ ಲಮಾಣಿ

ರನ್ನರ್‌: ನಟ ತ್ರಿವಿಕ್ರಮ್

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌‌ 11ನೇ ಆವೃತ್ತಿಯಲ್ಲಿ ಗಾಯಕ ಹನುಮಂತ ಲಮಾಣಿ ವಿಜೇತರಾಗಿ ಹೊರಹೊಮ್ಮಿದ್ದರು. ಕಿರುತೆರೆ ನಟ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದರು.

ಗಿಲ್ಲಿ ನಟ, ಸುದೀಪ್

BBK11– ವರ್ಷ: 2025–26

ವಿನ್ನರ್‌: ಗಿಲ್ಲಿ ನಟ

ರನ್ನರ್‌: ರಕ್ಷಿತಾ ಶೆಟ್ಟಿ

ಬಹುಮಾನದ ಮೊತ್ತ: ₹50 ಲಕ್ಷ

ಬಿಗ್‌ಬಾಸ್‌ ಸೀಸನ್ 12ರ ವಿಜೇತರಾಗಿ ಗಿಲ್ಲಿ ನಟ ಹೊರ ಹಮ್ಮಿದ್ದಾರೆ. ರನ್ನರ್ ಅಪ್‌ ಪಟ್ಟವನ್ನು ರಕ್ಷಿತಾ ಶೆಟ್ಟಿ ಅಲಂಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.