ADVERTISEMENT

Big Boss 8: ನಿರ್ಮಲಾ ಚೆನ್ನಪ್ಪ ಹೊರ ಹೋಗಲು ಇಲ್ಲಿವೆ ಕಾರಣಗಳು...

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 2:41 IST
Last Updated 15 ಮಾರ್ಚ್ 2021, 2:41 IST
ನಿರ್ಮಲಾ ಚೆನ್ನಪ್ಪ
ನಿರ್ಮಲಾ ಚೆನ್ನಪ್ಪ   

ಬೆಂಗಳೂರು: ಎರಡನೇ ವಾರದಲ್ಲಿ ಬಿಗ್‌ ಬಾಸ್‌ ಮನೆಯಿಂದ ನಟಿ, ನಿರ್ಮಾಪಕಿ, ರಂಗಭೂಮಿ ಕಲಾವಿದೆ ನಿರ್ಮಲಾ ಚೆನ್ನಪ್ಪ ಹೊರಬಂದಿದ್ದಾರೆ.

ಮನೆಯ ಸದಸ್ಯರ ಜೊತೆಗಿನ ಹೊಂದಾಣಿಕೆ ಸಮಸ್ಯೆ ಹಾಗೂ ನೋಡುಗರಿಂದ ಸಾಕಷ್ಟು ಪ್ರಮಾಣದಲ್ಲಿ ವೋಟ್‌ಗಳ ಸಿಗದ ಕಾರಣ ನಿರ್ಮಲಾ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರ ನಿರ್ಮಲಾ ಜೊತೆವಿಶ್ವನಾಥ್, ಪ್ರಶಾಂತ್ ಸಂಬರಗಿ, ಗೀತಾ ಭಾರತಿ ಭಟ್, ಚಂದ್ರಕಲಾ ಮೋಹನ್ ಇದ್ದರು. ಇವರು ಸೇಪ್‌ಆಗಿ ನಿರ್ಮಲಾ ಹೊರಬಿದ್ದಿದ್ದಾರೆ.

ಮನೆಯ ಸದಸ್ಯರಿಗೆ ನಿರ್ಮಲಾ ಮೇಲೆ ಮೊದಲಿನಿಂದಲೂ ಬೇಸರ ಇತ್ತು. ಅವರು ಸದಸ್ಯರ ಜೊತೆಹೊಂದಿಕೊಳ್ಳುತ್ತಿರಲಿಲ್ಲ, ಎಲ್ಲರ ಗಮನ ನನ್ನ ಮೇಲೆ ಇರಬೇಕು ಎಂಬ ಕಾರಣಕ್ಕೆ ತೋರಿಕೆಯ ಆಟಗಳನ್ನು ಆಡುತ್ತಿದ್ದರು. ಇದ್ಯಾವುದು ನೋಡುಗರಿಗೆ ಇಷ್ಟವಾಗಲಿಲ್ಲ. ಈ ಕಾರಣಕ್ಕೆ ಅವರಿಗೆ ನಿರೀಕ್ಷೆಯಂತೆ ವೋಟ್‌ಗಳು ಬರಲಿಲ್ಲ.

ADVERTISEMENT

ಬಿಗ್‌ಬಾಸ್‌ ಮನೆಯಲ್ಲಿ ಅಡುಗೆ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರ ಜೊತೆ ಜಗಳವಾಡಿಕೊಂಡಿದ್ದರು. ಚಂದ್ರಕಲಾ ಮತ್ತು ನಿರ್ಮಲಾ ನಡುವೆ ಹಲವು ಸಲ ಜಗಳವಾಗಿತ್ತು. ಅರವಿಂದ್‌ ಕೂಡ ನಿರ್ಮಲಾ ಜೊತೆ ಬೆಂಕಿ ಪೊಟ್ಟಣ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದರು.

ಇನ್ನು ಇತರರ ಗಮನ ಸೆಳೆಯುವ ಸಲುವಾಗಿ ತೋರಿಕೆಗಾಗಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಸೀರೆ ಉಟ್ಟುಕೊಂಡು ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದರು. ಇವರ ಈ ಆಟ ನೋಡುಗರಿಗೆ ಇಷ್ಟವಾಗಲಿಲ್ಲ.

ಮೊದಲ ಹಾಗೂ ಎರಡನೇ ವಾರದಲ್ಲಿ ನಿರ್ಮಲಾ ನಾಮಿನೇಟ್ ಆಗಿದ್ದರು. ಮೊದಲ ವಾರ ಧನುಶ್ರೀ ಎಲಿಮಿನೇಟ್ ಆದ ಕಾರಣ ನಿರ್ಮಲಾ ಸೇಪ್‌ ಆಗಿದ್ದರು. ಈ ವಾರ ಅವರು ಕೂಡ ಹೊರ ನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.