ADVERTISEMENT

ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು: ಕಿರುತೆರೆ ನಟಿ ನಂದಿನಿ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 15:47 IST
Last Updated 29 ಡಿಸೆಂಬರ್ 2025, 15:47 IST
<div class="paragraphs"><p>ಸಿ.ಎಂ.ನಂದಿನಿ</p></div>

ಸಿ.ಎಂ.ನಂದಿನಿ

   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಕಿರುತೆರೆ ನಟಿ ಸಿ.ಎಂ.ನಂದಿನಿ (24) ಅವರ ಅಂತ್ಯಕ್ರಿಯೆ ಸ್ವ ಗ್ರಾಮ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಸೋಮವಾರ ಸಂಜೆ‌ ನೆರವೇರಿತು.

ಗ್ರಾಮದ ದಿ.ಮಹಾಬಲೇಶ್ವರಪ್ಪ, ಬಸವ ರಾಜೇಶ್ವರಿ ದಂಪತಿ ಪುತ್ರಿ ನಂದಿನಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರ ತಾಯಿ ಹಗರಿ ಗಜಾಪುರ ಗ್ರಾಮದಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದಾರೆ.

ADVERTISEMENT

ನಂದಿನಿ ಅವರು ಕನ್ನಡ, ತಮಿಳು, ತೆಲುಗು ಚಾನೆಲ್‌ಗಳಲ್ಲಿ ಗೌರಿ, ನೀನಾದೆನಾ ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ಧಿ ಗಳಸಿದ್ದರು. ನಂದಿನಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿ ಊರಲ್ಲಿ ಹರಿದಾಡುತ್ತಿದೆ, ಆದರೆ ನಂದಿನಿ  ಸೌಂದರ್ಯ ಕಾಪಾಡಿಕೊಳ್ಳುವ ಸಲುವಾಗಿ ಡಯಟ್ ಮಾಡುತ್ತಿದ್ದರು, ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಯೊಬ್ಬರು ತಿಳಿಸಿದರು.

ಸಿ.ಎಂ.ನಂದಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.