ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ
(ಚಿತ್ರ ಕೃಪೆ–ಕಲರ್ಸ್ ಕನ್ನಡ)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಕೇವಲ ಒಂದೇ ದಿನ ಮಾತ್ರ ಬಾಕಿಯಿದೆ. ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳಿದ್ದು, ಈ ಪೈಕಿ ವಿನ್ನರ್ ಯಾರಾಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
ಮೊದಲಿಗೆ ಡೈರೆಕ್ಟ್ ಟಿಕೆಟ್ ಟು ಫಿನಾಲೆ ವಾರಕ್ಕೆ ಹನುಮಂತು ಎಂಟ್ರಿ ಕೊಟ್ಟಿದ್ದರು. ಬಳಿಕ ಮೋಕ್ಷಿತಾ ಪೈ, ತ್ರಿವಿಕ್ರಮ್ ಆಯ್ಕೆಯಾಗಿದ್ದರು. ಇನ್ನು ಕಳೆದ ಭಾನುವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ನಾಮಿನೇಷನ್ ಸ್ಥಾನದಲ್ಲಿದ್ದ ಉಗ್ರಂ ಮಂಜು, ಭವ್ಯ ಗೌಡ ಹಾಗೂ ರಜತ್ ಸೇಫ್ ಆಗಿ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಶನಿವಾರ (ಜನವರಿ 25) ಹಾಗೂ ಭಾನುವಾರ (ಜನವರಿ 26) ಫಿನಾಲೆ ನಡೆಯಲಿದೆ. ಪ್ರತಿ ದಿನ ಎಪಿಸೋಡ್ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿತ್ತು. ವೀಕೆಂಡ್ ಸಂಚಿಕೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಆದರೆ, ಫಿನಾಲೆ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಯಿಂದ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.