
ನಿನಗಾಗಿ, ರಾಮಾಚಾರಿ, ಸೀತಾರಾಮ ಧಾರಾವಾಹಿಗಳು
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡ ಕಿರುತೆರೆಯಲ್ಲಿ 2025ರಲ್ಲಿ ಅನೇಕ ಧಾರಾವಾಹಿಗಳು ತೆರೆ ಕಂಡಿದ್ದವು. ವಿಭಿನ್ನ ಕಥೆಯನ್ನು ಒಳಗೊಂಡ ಧಾರಾವಾಹಿಗಳು ತೆರೆಗೆ ಬಂದ ಕೆಲವೇ ದಿನಗಳಲ್ಲೇ ಅಂತ್ಯಕಂಡಿವೆ. ಅದರಲ್ಲೂ ಕೆಲ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಕುಸಿತಕಂಡು ಮುಕ್ತಾಯಗೊಂಡಿವೆ.
ಕರಿಮಣಿ, ದೃಷ್ಟಿಬೊಟ್ಟು, ರಾಮಾಚಾರಿ ಧಾರಾವಾಹಿಗಳು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ, ದೃಷ್ಟಿಬೊಟ್ಟು, ಲಕ್ಷ್ಮೀ ಬಾರಮ್ಮ, ವಧು, ನಿನಗಾಗಿ ಹಾಗೂ ರಾಮಾಚಾರಿ ಧಾರಾವಾಹಿಗಳು ಅಂತ್ಯ ಕಂಡಿವೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾರಾಮ, ಶ್ರೀರಸ್ತು ಶುಭಮಸ್ತು ಧಾರಾವಾಹಿಗಳು ಮುಕ್ತಾಯಗೊಂಡಿವೆ.
ನೀನಾದೆ ನಾ ಧಾರಾವಾಹಿ
ಇನ್ನೂ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವೇರಿ ಕನ್ನಡ ಮೀಡಿಯಂ, ನೀನಾದೆ ನಾ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿ, ಅವನು ಮತ್ತೆ ಶ್ರಾವಣಿ, ಶ್ರೀ ದೇವಿ ಮಹಾತ್ಮೆ ಧಾರಾವಾಹಿಗಳು ಕೊನೆಗೊಂಡಿವೆ. ಇವುಗಳು ಈ ವರ್ಷ ಮುಕ್ತಾಯಗೊಂಡ ಕನ್ನಡ ಕಿರುತೆರೆಯ ಧಾರಾವಾಹಿಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.