ADVERTISEMENT

ಸಾವಿರದ ಸಂಭ್ರಮದಲ್ಲಿ ‘ಪಾರು’ ಧಾರಾವಾಹಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 10:58 IST
Last Updated 2 ಅಕ್ಟೋಬರ್ 2022, 10:58 IST
‘ಪಾರು’ ಧಾರಾವಾಹಿಯ 1000ನೇ ಸಂಚಿಕೆಯ ಪೋಸ್ಟರ್‌
‘ಪಾರು’ ಧಾರಾವಾಹಿಯ 1000ನೇ ಸಂಚಿಕೆಯ ಪೋಸ್ಟರ್‌   

ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ ‘ಪಾರು’ ಸಾವಿರಸಂಚಿಕೆಗಳನ್ನುಪೂರೈಸುತ್ತಿದೆ.

ಅಖಿಲಾಂಡೇಶ್ವರಿಯಾಗಿ ವಿನಯಾ ಪ್ರಸಾದ್‌, ಪಾರು ಪಾತ್ರದ ಮೋಕ್ಷಿತಾ ಪೈ, ಆದಿ ಪಾತ್ರದ ಶರತ್‌, ವೀರಯ್ಯ ದೇವನಾಗಿ ಕಾಣಿಸಿಕೊಂಡ ಎಸ್‌.ನಾರಾಯಣ್‌, ನಾಗೇಂದ್ರ ಶಾ ಅವರ ತಾರಾಗಣ ವೀಕ್ಷಕರನ್ನು ರಂಜಿಸುತ್ತಲೇ ಸಾಗಿದೆ.

ವಿನೂತನ ನಿರೂಪಣೆಯ ಶೈಲಿಯ ಮೂಲಕ ಈಗಾಗಲೇ ಸೂಪರ್ ಹಿಟ್ ಆಗಿರುವ ಪಾರು ಧಾರಾವಾಹಿ ತನ್ನ ಅದ್ಧೂರಿತನವನ್ನು ಎಲ್ಲಿಯೂ ಬಿಟ್ಟಿಲ್ಲ. ಅದ್ಧೂರಿ ಸೆಟ್, ಭವ್ಯ ಬಂಗಲೆ, ಪ್ರತಿದೃಶ್ಯದ ಸಿರಿವಂತಿಕೆವೀಕ್ಷಕರಿಗೆ ಸಿನಿಮಾದ ಅನುಭವ ನೀಡುವ ಪ್ರಯತ್ನ ಮಾಡಿದೆ.

ADVERTISEMENT

ಪ್ರೀತಿ, ಸ್ನೇಹ , ಕಾಳಜಿ, ಆದರ್ಶ ಮತ್ತು ಮನೋರಂಜನೆ ಹೀಗೆ ಎಲ್ಲವನ್ನು ಒಟ್ಟುಗೂಡಿಸಿ 1000 ಸಂಚಿಕೆಗಳನ್ನುಪೂರೈಸುತ್ತಿರುವಹೊತ್ತಿನಲ್ಲಿಅಖಿಲಾಂಡೇಶ್ವರಿಯುಪಾರುವನ್ನುಸೊಸೆಯಾಗಿಒಪ್ಪಿಕೊಳ್ಳುವಹಂತದಲ್ಲಿದೆ. ಮುಂದಿನಕಥೆಯಾವರೀತಿಯಲ್ಲಿತಿರುವುಪಡೆದುಕೊಳ್ಳಲಿದೆಎಂಬ ಕುತೂಹಲ ಉಳಿದಿದೆ.

ಅಖಿಲಾಂಡೇಶ್ವರಿಯವರಅಲಂಕಾರಅವರುಉಡುವಸೀರೆ, ಧರಿಸುವಒಡವೆಗಳಿಗೆಅಸಂಖ್ಯಾತಮಹಿಳಾವೀಕ್ಷಕರುಆಕರ್ಷಿತರಾಗಿದ್ದಾರೆಹಾಗೂಅವರನ್ನುಅನುಕರಿಸುತ್ತಿದ್ದಾರೆ ಎಂದಿದೆ ಧಾರಾವಾಹಿಯ ತಂಡ.

ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ಅವರ ಪತ್ನಿ ಶ್ರೀವಿದ್ಯಾರಾಜ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಮತ್ತು ಗುರುಪ್ರಸಾದ್ಮುಡೇನಹಳ್ಳಿಅವರು ನಿರ್ದೇಶನ ಮಾಡುತ್ತಿದ್ದಾರೆ.

ಸೋಮವಾರದಿಂದ– ಶುಕ್ರವಾರದವರೆಗೂಪ್ರತಿದಿನಸಂಜೆ6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.