ADVERTISEMENT

ಟಿವಿಯಲ್ಲಿ ಬರುತ್ತಿದೆ ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭೂಲೆಯ್ಯ 2

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2022, 14:11 IST
Last Updated 13 ಅಕ್ಟೋಬರ್ 2022, 14:11 IST
ಕಾರ್ತಿಕ್ ಆರ್ಯನ್ - ಕಿಯಾರಾ ಅಡ್ವಾಣಿ
ಕಾರ್ತಿಕ್ ಆರ್ಯನ್ - ಕಿಯಾರಾ ಅಡ್ವಾಣಿ    

ಬೆಂಗಳೂರು: ಹಾರರ್ ಮತ್ತು ಕಾಮಿಡಿ ಕಥಾನಕ ಹೊಂದಿದ್ದ ಭೂಲ್ ಭೂಲೆಯ್ಯ 2 ಚಿತ್ರ ಜಾಗತಿಕವಾಗಿ ಟಿವಿಯಲ್ಲಿ ಪ್ರಸಾರವಾಗಲಿದೆ.

ಬಾಲಿವುಡ್‌ನ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದಾದ ಭೂಲ್ ಭೂಲೆಯ್ಯ 2, ಉತ್ತಮ ಗಳಿಕೆ ಕಂಡು ಹೊಸ ದಾಖಲೆ ಸೃಷ್ಟಿಸಿತ್ತು.

ಕಾರ್ತಿಕ್ ಆರ್ಯನ್ ಅಭಿನಯದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದರು. ಜತೆಗೆ ಟಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ADVERTISEMENT

ಭೂಲ್ ಭೂಲೆಯ್ಯ ಚಿತ್ರ ಸೋನಿ ಮ್ಯಾಕ್ಸ್ ಟಿವಿ ಚಾನೆಲ್ ಮೂಲಕ ಅಕ್ಟೋಬರ್ 16ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಚಿತ್ರ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.