‘ಕೃಷ್ಣವಂಶಿ’
ಕೌಟುಂಬಿಕ ಕಥೆ ಆಧಾರಿತ ‘ಕೃಷ್ಣವಂಶಿ’ ಎಂಬ ಹೊಸ ಧಾರಾವಾಹಿಯು ಉದಯ ಟಿವಿ ವಾಹಿನಿಯಲ್ಲಿ ಇಂದಿನಿಂದ (ಮಾರ್ಚ್ 2) ರಾತ್ರಿ 9:30 ಕ್ಕೆ ಪ್ರಸಾರವಾಗಲಿದೆ ಎಂದು ಧಾರಾವಾಹಿ ತಂಡ ಮಾಹಿತಿ ನೀಡಿದೆ.
ನಾಚಿಕೆ ಸ್ವಭಾವದ ಕೃಷ್ಣ ಹಾಗೂ ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೇಮಕಥೆಯೇ ‘ಕೃಷ್ಣವಂಶಿ’. ದೊರೆಸ್ವಾಮಿ ಅವರ ಮುದ್ದಿನ ಪುತ್ರಿ ವಂಶಿ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಬೇಕು ಎಂಬುದು ತಂದೆಯ ಕನಸು. ಆದರೆ ವಂಶಿಯ ಆಲೋಚನೆಗಳೇ ಬೇರೆಯಾಗಿರುತ್ತದೆ. ಸವಾಲುಗಳ ನಡುವೆ ವಂಶಿ ಮತ್ತು ಕೃಷ್ಣ ಅವರ ಯಶಸ್ವಿಯಾಗುತ್ತಾರಾ ಎನ್ನುವುದೇ ಮುಂದಿನ ಕಥಾ ಹಂದರ.
ನಾಯಕ ಕೃಷ್ಣನ ಪಾತ್ರದಲ್ಲಿ ರೋಹನ್ ಎ. ಮತ್ತು ನಾಯಕಿ ವಂಶಿಯಾಗಿ ಶಾರದಾ ಪುಂಡಿ ಹಾಗೂ ಗಿರಿಜಾ ಲೋಕೇಶ್, ಹನುಮಂತೇಗೌಡ, ಹಂಸ, ವಿಜಯ್, ರಜಿನಿ ಟಿ.ಡಿ, ಸಿದ್ದಾರ್ಥ ಮಾಧ್ಯಮಿಕ, ಸಿಂಧೂ ಪಿ., ಸಂದೀಪ್ ಎಸ್.ಆರ್., ಪುಷ್ಪ ಅನಿಲ್ ಕುಮಾರ್, ಸುಕೃತಾ ನಾಗ್ ಮತ್ತಿತರರ ತಾರಾಗಣವಿದೆ.
ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ಅವರು ಪರಿಣಿತ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ಧಾರೆ. ಸುಬ್ರಹ್ಮಣ್ಯ ಪ್ರಸಾದ್ ಅವರು ನಿರ್ದೇಶನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.