ADVERTISEMENT

ಹುಟ್ಟೂರಿನಲ್ಲಿ ಬಿಗ್‌ಬಾಸ್‌ ಖ್ಯಾತಿಯ ಮಲ್ಲಮ್ಮಗೆ ಅದ್ಧೂರಿ ಸ್ವಾಗತ: ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2025, 7:03 IST
Last Updated 20 ನವೆಂಬರ್ 2025, 7:03 IST
<div class="paragraphs"><p>ಮಲ್ಲಮ್ಮ</p></div>

ಮಲ್ಲಮ್ಮ

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ ಮನೆಗೆ ಹಿರಿಯ ಸದಸ್ಯರಾಗಿ ಪ್ರವೇಶಿಸಿದ್ದ ಮಲ್ಲಮ್ಮ ಅವರು ತಮ್ಮ ಸ್ವಂತ ಊರಿಗೆ ತೆರಳಿದ್ದಾರೆ. ಅಲ್ಲಿ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಮಾತಿನ ಮಲ್ಲಿ ಅಂತಲೇ ಖ್ಯಾತಿ ಪಡೆದಿರುವ ಮಲ್ಲಮ್ಮ ಅವರಿಗೆ ಊರಿನವರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಮಲ್ಲಮ್ಮ ಅವರು ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದರು. ತಮಗೆ ವಯಸ್ಸಾಗಿದ್ದರು ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಲ್ಲಮ್ಮ‌ ಎಲ್ಲರ ಮನಗೆದ್ದಿದ್ದರು. ಈಗ ಬಿಗ್‌ಬಾಸ್‌ ಮನೆಯಿಂದ ಆಚೆಬಂದ ಬಳಿಕ ಇದೇ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕನ್ನಳ್ಳಿ ಗ್ರಾಮಕ್ಕೆ ಹೋಗಿದ್ದಾರೆ. ಅಲ್ಲಿ ಮಲ್ಲಮ್ಮ ಅವರಿಗೆ ಊರಿನವರು ಎತ್ತಿನ ಬಂಡಿ, ಡೊಳ್ಳು ಬಾರಿಸುವ ಮೂಲಕ ಬರಮಾಡಿಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಮಲ್ಲಮ್ಮ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಊರಿನ ಜನರು ಮಲ್ಲಮ್ಮ ಅವರನ್ನು ಸ್ವಾಗತ ಮಾಡಿ, ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ಊರಿನವರು ಮಲ್ಲಮ್ಮಗೆ ಸಾಥ್ ನೀಡಿದ ಭಾರ್ಗವಿ ಎಲ್ಎಲ್‌ಬಿ ಧಾರಾವಾಹಿ ನಟ ಮನೋಜ್‌ ಕುಮಾರ್ ಹಾಗೂ ಪಲ್ಲವಿ ಗೌಡ ಅವರಿಗೂ ಸನ್ಮಾನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.