ADVERTISEMENT

OTT Release: ಏಳುಮಲೆ, ಕಿಷ್ಕಿಂಧಾಪುರಿ ಸೇರಿದಂತೆ ಪ್ರಮುಖ ಸಿನಿಮಾಗಳ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2025, 9:26 IST
Last Updated 17 ಅಕ್ಟೋಬರ್ 2025, 9:26 IST
<div class="paragraphs"><p><strong>ಏಳುಮಲೆ ಮತ್ತು&nbsp;ಕಿಷ್ಕಿಂಧಾಪುರಿ ಸಿನಿಮಾ&nbsp;</strong></p></div>

ಏಳುಮಲೆ ಮತ್ತು ಕಿಷ್ಕಿಂಧಾಪುರಿ ಸಿನಿಮಾ 

   

ಚಿತ್ರ: ಇನ್‌ಸ್ಟಾಗ್ರಾಮ್

ದೀಪಾವಳಿ ಹಬ್ಬದ ಪ್ರಯುಕ್ತ ಈ ವಾರ ಒಟಿಟಿಯ ವೇದಿಕೆಗಳಲ್ಲಿ ಹಲವು ಹೊಸ ಸಿನಿಮಾಗಳು ತೆರೆ ಕಾಣುತ್ತಿವೆ. ಪ್ರಣಯ, ಆ್ಯಕ್ಷನ್, ಹಾಸ್ಯ, ಹಾರರ್ ಥ್ರಿಲ್ಲರ್ ಸೇರಿದಂತೆ ಹಲವಾರು ಸಿನಿಮಾಗಳು ಅಕ್ಟೋಬರ್ 14ರಿಂದ 17ರ ಅವಧಿಯಲ್ಲಿ ಒಟಿಟಿಯಲ್ಲಿ ತೆರೆ ಕಂಡಿವೆ.

ADVERTISEMENT

ಏಳುಮಲೆ (Elumale)

ನಟ ರಾಣಾ ಹಾಗೂ ನಟಿ ಪ್ರಿಯಾಂಕಾ ಆಚಾರ್ ಅಭಿನಯದ ಏಳುಮಲೆ ಸಿನಿಮಾ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 5ರಂದು ಬಿಡುಗಡೆಯಾಗಿತ್ತು. ಸಿನಿಮಾ ತೆರೆಕಂಡ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿತ್ತು. ಇದೀಗ ಏಳುಮಲೆ ಸಿನಿಮಾ ಒಟಿಟಿಗೆ ಬಂದಿದೆ.

ಎಲ್ಲಿ ನೋಡಬಹುದು: ಜೀ 5

ಭಾಷೆ: ಕನ್ನಡ

ಬಿಡುಗಡೆ: ಅ.17

ಕಿಷ್ಕಿಂಧಾಪುರಿ (Kishkindhapuri)

ನಟಿ ಅನುಪಮಾ ಪರಮೇಶ್ವರನ್ ಹಾಗೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿನಯದಲ್ಲಿ ಮೂಡಿಬಂ‌ದಿರುವ ‘ಕಿಷ್ಕಿಂಧಾಪುರಿ’ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ. ಈ ಕುಷ್ಕಿಂಧಾಪುರಿ ಸಿನಿಮಾವನ್ನು ಕೌಶಿಕ್ ಪೆಗಲ್ಲಪತಿ ನಿರ್ದೇಶಿಸಿದ್ದಾರೆ. ಇದು ಭಯಾನಕ ಥ್ರಿಲ್ಲರ್ ಚಲನಚಿತ್ರವಾಗಿದೆ.

ಎಲ್ಲಿ ನೋಡಬಹುದು: ಜೀ5

ಭಾಷೆ: ತೆಲುಗು

ಬಿಡುಗಡೆ: ಅ. 17

ಆನಂದಲಹರಿ (anandalahari)

ನೈಜವಾದ ಪ್ರೇಮಕಥೆಯನ್ನು ಹೊಂದಿರುವ ‘ಆನಂದಲಹರಿ’ ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಆನಂದಲಹರಿ ವೆಬ್ ಸರಣಿಯು ಆನಂದ್ ಮತ್ತು ಲಹರಿ ಎಂಬ ದಂಪತಿಗಳ ಸುತ್ತ ಸುತ್ತುವ ಕಥೆಯಾಗಿದೆ.

ಎಲ್ಲಿ ನೋಡಬಹುದು: ಆಹಾ (aha)

ಭಾಷೆ: ತೆಲುಗು

ಬಿಡುಗಡೆ: ಅ.17

ಅಭ್ಯಂತರ ಕುಟ್ಟಾವಳಿ (Abhyanthara Kuttavali)

‘ಅಭ್ಯಂತರ ಕುಟ್ಟಾವಳಿ’ ಸೇತುನಾಥ್ ಪದ್ಮಕುಮಾರ್ ಅವರ ಚೊಚ್ಚಲ ನಿರ್ದೇಶಕದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ವ್ಯಕ್ತಿಯೊಬ್ಬ ಎರಡನೇ ಮದುವೆ ಮಾಡಿಕೊಳ್ಳುತ್ತಾನೆ. ಆತನ ಮೇಲೆ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆಯ ಸುಳ್ಳು ಆರೋಪಗಳನ್ನು ಹಾಕಲಾಗುತ್ತದೆ. ಆಗ ನ್ಯಾಯ ವ್ಯವಸ್ಥೆಯೇ ಆತನಿಗೆ ಶಿಕ್ಷೆ ನೀಡುತ್ತದೆ.

ಎಲ್ಲಿ ನೋಡಬಹುದು: ಜೀ 5

ಭಾಷೆ: ಮಲಯಾಳಂ

ಬಿಡುಗಡೆ: ಅ.17

ಇಂಬಾಮ್ (Imbam)

ಶ್ರೀಜಿತ್ ಚಂದ್ರನ್ ನಿರ್ದೇಶನದಲ್ಲಿ ಮೂಡಿಬಂದ ಇಂಬಾಮ್ ಸಿನಿಮಾವು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಇದು ಮಲಯಾಳಂ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ ಪರಂಬೊಲ್, ದರ್ಶನ ಸುದರ್ಶನ್, ಲಾಲು ಅಲೆಕ್ಸ್, ಮೀರಾ ವಾಸುದೇವನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಎಲ್ಲಿ ನೋಡಬಹುದು: ಸನ್‌ಎನ್‌ಎಕ್ಸ್‌ಟಿ (Sun NXT)

ಭಾಷೆ: ಮಲಯಾಳಂ

ಬಿಡುಗಡೆ: ಅ.17

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.