
ಪ್ರಜಾವಾಣಿ ವಾರ್ತೆ
ಮುಂಬೈ: ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ನ 12ನೇ ಆವೃತ್ತಿಯ ವಿಜೇತರಾಗಿ ಉತ್ತರಾಖಂಡದ ಪವನ್‌ದೀಪ್ ರಾಜನ್ ಹೊರಹೊಮ್ಮಿದ್ದಾರೆ. ಅರುಣಿತಾ ಕಾಂಜಿಲಾಲ್ ಹಾಗೂ ಸಾಯಲಿ ಕಾಂಬ್ಳೆ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಮೂಲದ ನಿಹಾಲ್ ತಾವ್ರೊ ಅವರು 5ನೇ ಸ್ಥಾನ ಪಡೆದಿದ್ದಾರೆ. ಡ್ಯಾನಿಷ್ ಮೊಹ್ಮದ್, ಷಣ್ಮುಖಪ್ರಿಯಾ ಅವರು ಕ್ರಮವಾಗಿ 4 ಹಾಗೂ 6ನೇ ಸ್ಥಾನ ಪಡೆದಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.