ADVERTISEMENT

ಪ್ರಿಯಾಂಕಾ ಚೌಧರಿ, ಸಾಜಿದ್ ಖಾನ್ ಅವರೊಂದಿಗೆ ನಟಿಸಲು ಬಯಸುತ್ತೇನೆ: ಸಲ್ಮಾನ್ ಖಾನ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 10:17 IST
Last Updated 13 ಜನವರಿ 2023, 10:17 IST
   

ಮುಂಬೈ: ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಚೌಧರಿ ಮತ್ತು ಸಾಜಿದ್ ಖಾನ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.

ಹಿಂದಿಯ ಬಿಗ್ ಬಾಸ್–16 ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಸಿಮಿ ಗರೆವಾಲ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿರುವ ಸಲ್ಮಾನ್, ಈ ಸೀನನ್‌ನ ಸ್ಪರ್ಧಿಯಾಗಿರುವ ಪ್ರಿಯಾಂಕಾ ಚೌಧರಿ ಹಾಗೂ ಸಾಜಿದ್ ಖಾನ್ ಅವರೊಂದಿಗೆ ಮುಂಬರುವ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

ಸಲ್ಮಾನ್ ಖಾನ್‌ ಈ ಹಿಂದೆ, ಪ್ರಿಯಾಂಕಾ ಅವರನ್ನು 'ಹೀರೋಯಿನ್ ಮೆಟಿರಿಯಲ್' ಎಂದು ಅಭಿನಂದಿಸಿದ್ದರು.

ADVERTISEMENT

ಈ ವಾರ ಬಿಗ್ ಬಾಸ್ ಸೀಸನ್‌ನಲ್ಲಿ ಕುಟುಂಬದವರನ್ನು ಭೇಟಿ ಮಾಡುವ ಸಂಚಿಕೆ ಪ್ರಸಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.