ಬೆಂಗಳೂರು: ಸಿನಿಪ್ರಿಯರಿಗೆ ಇಲ್ಲಿದೆ ನೋಡಿ ಮತ್ತೊಂದು ಗುಡ್ ನ್ಯೂಸ್. ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ ಅಭಿನಯದ, ನರ್ತನ್ ನಿರ್ದೇಶಿಸಿರುವ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ 'ಭೈರತಿ ರಣಗಲ್' ಚಿತ್ರವು ಇದೇ ಜನವರಿ 26ರಂದು ಸಂಜೆ 4:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್‌ಗೆ ರುಕ್ಮಿಣಿ ವಸಂತ್ ಅವರು ಜೋಡಿಯಾಗಿದ್ದು ಇವರಿಬ್ಬರ ಜೋಡಿ ಮತ್ತಷ್ಟು ಮನರಂಜನೆ ನೀಡಲಿದೆ.
ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ ತಂಗಿಯಾಗಿ ನಟಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಡಬಲ್ ಶೇಡ್‌ನಲ್ಲಿ ಮಿಂಚಿದ್ದು, ಫಸ್ಟ್ ಹಾಫ್‌ನಲ್ಲಿ ಕಾನೂನು ಕಾಯುವ ವಕೀಲನಾಗಿ, ಸೆಕೆಂಡ್‌ಹಾಫ್‌ನಲ್ಲಿ ಕಾನೂನನ್ನೇ ಕೈಗೆತ್ತಿಕೊಳ್ಳುವ ಗ್ಯಾಂಗ್‌ಸ್ಟರ್ ಆಗಿ ಗಮನಸೆಳೆಯುತ್ತಾರೆ.
ಖಡಕ್ ಡೈಲಾಗ್ಗಳು, ಶಿವರಾಜ್ಕುಮಾರ್ ಅವರ ಉತ್ತಮವಾದ ನಟನೆ, ಶಬೀರ್, ರಾಹುಲ್ ಬೋಸ್ ಅವರಂತಹ ಖಳನಟರ ಸಖತ್ ಅಭಿನಯ ಸಿನಿಪ್ರಿಯರ ಮನಗೆಲ್ಲುವುದು ಗ್ಯಾರಂಟಿ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್, ಬಾಬು ಹಿರಣಯ್ಯ ಮತ್ತು ಮಧು ಗುರುಸ್ವಾಮಿ ನಟಿಸಿದ್ದಾರೆ.
ರೋಣಾಪುರದ ಜನರ ನೋವು, ಕಾರ್ಮಿಕರ ಸಂಕಷ್ಟಗಳ ಸುತ್ತ ಕಥೆ ಸಾಗುತ್ತದೆ. ಘಟ್ಟ ಎಂಬ ಸೈಕೋ ರಾಕ್ಷಸನ ಆರ್ಭಟವೂ ಇದೆ. ವಕೀಲನಾಗಿ ಜನರ ಪರ ನಿಲ್ಲುವ ರಣಗಲ್‌ಗೆ(ಡಾ. ಶಿವರಾಜ್ ಕುಮಾರ್) ಆ ಊರಿನ ಸರ್ಕಾರಿ ಆಸ್ಪತ್ರೆಯ ವೈದ್ಯೆ ವೈಶಾಲಿ ಮೇಲೆ (ರುಕ್ಮಿಣಿ ವಸಂತ್) ಪ್ರೀತಿ ಹುಟ್ಟುತ್ತದೆ. ಭೈರತಿ ರಣಗಲ್ ತನ್ನದೇ ಮೈನಿಂಗ್ ಸಾಮ್ರಾಜ್ಯ ಕಟ್ಟುತ್ತಾನೆ. ಅಲ್ಲಿಂದ ಮುಂದೆ ಪರಾಡೆ ಹಾಗೂ ರಣಗಲ್ ನಡುವಿನ ಏಟು ಎದಿರೇಟು ಹೇಗೆ ಸಾಗುತ್ತದೆ ಎಂಬುವುದೇ ಈ ಚಿತ್ರದ ಸಾರಾಂಶ.
ಒಬ್ಬ ಸಾಮಾನ್ಯ ವಕೀಲನಾಗಿದ್ದ ಭೈರತಿ ರಣಗಲ್ ಯಾಕೆ ಗ್ಯಾಂಗ್‌ಸ್ಟರ್ ಆದಾ ಎಂದು ತಿಳ್ಕೊಬೇಕಾ? ಹಾಗಿದ್ರೆ ವೀಕ್ಷಿಸಿ 'ಭೈರತಿ ರಣಗಲ್' ಇದೇ ಜನವರಿ 26 ರಂದು ಸಂಜೆ 4:30 ಕ್ಕೆ ಗಂಟೆಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.