
ಲಕ್ಷ್ಮೀ ನಿವಾಸ ಧಾರಾವಾಹಿ ಕಲಾವಿದರು
ಚಿತ್ರ: ಇನ್‌ಸ್ಟಾಗ್ರಾಂ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಯಾರೂ ಊಹಿಸಲಾರ ಟ್ವಿಸ್ಟ್ ಎದುರಾಗಿದೆ. ನ್ಯಾಯಾಲಯದಲ್ಲಿ ಸಿದ್ದೇಗೌಡರ ತೀರ್ಪು ಹೊರಬೀಳುವ ಮುನ್ನವೇ ಶ್ರೀಕಾಂತ್ ಅವರ ಮರು ಆಗಮನವಾಗಿದೆ. ಧಾರಾವಾಹಿ ಪ್ರೋಮೊ ನೋಡಿದ ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ.
ಶ್ರೀಕಾಂತ್ ಬರುತ್ತಿದ್ದ ಕಾರ್‌ಗೆ ರವಿಶಂಕರ್ ಅಪಘಾತದಲ್ಲಿ ಸಾಯುವಂತೆ ಮಾಡಿದ್ದನು. ಆಗ ಎಲ್ಲರೂ ಶ್ರೀಕಾಂತ್ ಸತ್ತಿದ್ದಾನೆ ಎಂದು ಭಾವಿಸಿದ್ದರು. ಆದರೀಗ ಏಕಾಏಕಿ ಶ್ರೀಕಾಂತ್ ಪ್ರತ್ಯಕ್ಷವಾಗಿದ್ದಾನೆ. ಇಷ್ಟೂ ದಿನ ಶ್ರೀಕಾಂತ್ ಎಲ್ಲಿದ್ದ? ಅಷ್ಟಕ್ಕೂ ಅಂದು ನಡೆದ ಅಪಘಾತದಲ್ಲಿ ಏನಾಯಿತು ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.
ಇದೇ ಶ್ರೀಕಾಂತ್ ಕಾರ್‌ನ್ನು ಅಪಘಾತ ಮಾಡಿದ ಆರೋಪದ ಮೇಲೆ ಸಿದ್ದೇಗೌಡ್ರು ಜೈಲಿನಲ್ಲಿದ್ದಾರೆ. ಇದರಲ್ಲಿ ಸಿದ್ದೇಗೌಡ್ರು ತಪ್ಪು ಇಲ್ಲ ಎಂದು ಭಾವನಾ ಸಾಬೀತುಪಡಿಸಲು ಮುಂದಾಗಿದ್ದಾಳೆ. ಅಷ್ಟರಲ್ಲಿ ಶ್ರೀಕಾಂತ್ ಎಂಟ್ರಿ ಆಗಿದೆ. ಮುಂದಿನ ಸಂಚಿಕೆಗಳಲ್ಲಿ ಸಿದ್ದೇಗೌಡ್ರು ಆಚೆ ಬರುತ್ತಾರಾ ಅಥವಾ ರವಿಶಂಕರ್ ಮತ್ತೆ ಕುತಂತ್ರ ಮಾಡುತ್ತಾನಾ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.