ADVERTISEMENT

ವಧುವಿನ ಹುಡುಕಾಟ ನಡೆಸಲಿರುವ ಗಾಯಕ ಮಿಕಾ ಸಿಂಗ್‌: ಮತ್ತೊಂದು ಸ್ವಯಂವರ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2022, 13:04 IST
Last Updated 28 ಫೆಬ್ರುವರಿ 2022, 13:04 IST
ಗಾಯಕ ಮಿಕಾ ಸಿಂಗ್‌
ಗಾಯಕ ಮಿಕಾ ಸಿಂಗ್‌   

ಗಾಯಕ ಮಿಕಾ ಸಿಂಗ್‌ ಟಿವಿ ಕಾರ್ಯಕ್ರಮದ ಮೂಲಕ ವಧುವಿನ ಹುಡುಕಾಟ ನಡೆಸಲಿದ್ದಾರೆ. ಈ ಹಿಂದೆ ನಟಿಯರಾದ ರಾಖಿ ಸಾವಂತ್‌, ಮಲ್ಲಿಕಾ ಶೆರಾವತ್‌, ರತನ್‌ ರಜಪೂತ್‌ ಟಿವಿ ರಿಯಾಲಿಟಿ ಕಾರ್ಯಕ್ರಮದಲ್ಲೇ 'ಸ್ವಯಂವರ' ನಡೆಸಿ, ವರನ ಆಯ್ಕೆ ಮಾಡಿಕೊಂಡಿದ್ದರು.

ಸ್ವಯಂವರ ಶೋ ರೀತಿಯಲ್ಲೇ ಮಿಕಾ ಸಿಂಗ್‌ ಅವರ ವಧು ಅನ್ವೇಷಣೆ ಕಾರ್ಯಕ್ರಮವೂ ನಡೆಯಲಿದೆ ಎಂದು ವರದಿಯಾಗಿದೆ. ದೇಶದ ಬಹುತೇಕ ಎಲ್ಲ ಭಾಗಗಳಿಂದಲೂ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇನ್ನು ಕೆಲವು ತಿಂಗಳಲ್ಲೇ ಕಾರ್ಯಕ್ರಮವು ಪ್ರಸಾರವಾಗಲಿದ್ದು, ಅದರಲ್ಲಿ ಆಯ್ಕೆಯಾಗುವ ವಧುವಿನೊಂದಿಗೆ ಮಿಕಾ ವಿವಾಹ ನಿಶ್ಚಯ ಮಾಡಿಕೊಳ್ಳಲಿದ್ದಾರೆ. ಆದರೆ, ಕಾರ್ಯಕ್ರಮದಲ್ಲೇ ಮದುವೆಯಾಗುವುದಿಲ್ಲ ಎಂದು ತಿಳಿದು ಬಂದಿದೆ.

ಮಲ್ಲಿಕಾ ಶೆರಾವತ್‌, ರಾಖಿ ಸಾವಂತ್‌ ಹಾಗೂ ರತನ್‌ ರಜಪೂತ್‌ ಅವರು ಕಾರ್ಯಕ್ರಮದಲ್ಲಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿದ್ದರಾದರೂ ಅವರೊಂದಿಗೆ ಮದುವೆ ಆಗಲಿಲ್ಲ.

ADVERTISEMENT
ರಾಖಿ ಸಾವಂತ್‌

ಮಿಕಾ ತಮ್ಮ ಜನ್ಮದಿನದಂದು ರಾಖಿ ಸಾವಂತ್‌ ಅವರಿಗೆ ಮುತ್ತು ನೀಡಿದ್ದರು. ಆ ಘಟನೆಯು ವಿವಾದ ರೂಪ ಪಡೆದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಹೊಸ ಕಾರ್ಯಕ್ರಮದಲ್ಲಿ ಮಿಕಾ ಮತ್ತು ರಾಖಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೆ.

2010ರಲ್ಲಿ 'ರಾಹುಲ್‌ ದುಲ್ಹನಿಯಾ ಲೇ ಜಾಯೆಗಾ' ಕಾರ್ಯಕ್ರಮದಲ್ಲಿ ನಟ ರಾಹುಲ್‌ ಮಹಾಜನ್‌ ಅವರು ಬೆಂಗಾಲಿ ನಟಿ ದಿಂಪಿ ಗಂಗೂಲಿ ಅವರನ್ನು ಮೆಚ್ಚಿಕೊಂಡು ಮದುವೆಯಾಗಿದ್ದರು. ದಂಪತಿ ನಾಲ್ಕು ವರ್ಷ ಜೊತೆಯಾಗಿದ್ದು 2015ರಲ್ಲಿ ವಿಚ್ಛೇದನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.