
ಮಕರ ಸಂಕ್ರಾತಿಯ ಪ್ರಯುಕ್ತ ಕನ್ನಡದ ವಾಹಿನಿ ಸ್ಟಾರ್ ಸುವರ್ಣ ‘ಸುವರ್ಣ ಸಂಕ್ರಾಂತಿ ಸಂಭ್ರಮ‘ ಆಚರಿಸಲು ಸಜ್ಜಾಗಿದೆ.
ಸುಗ್ಗಿ ಹಬ್ಬವನ್ನು 'ಆಸೆ' ಧಾರಾವಾಹಿಯ ಮನೆಯಲ್ಲಿ ಆಚರಿಸಲಾಗಿದೆ. ಹಳ್ಳಿಯ ಸೊಗಡಿನೊಂದಿಗೆ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ.
ಮನೆಯಲ್ಲಿ ಹಾಡು, ಹರಟೆ, ಮೋಜು ಮಸ್ತಿಯ ಜೊತೆಗೆ, ಹಿತೇಶ್ ಕಾಪಿನಡ್ಕ ತನ್ನ ವಿನೂತನ ಗೆಟಪ್‌ನಿಂದ ಹಾಸ್ಯಮಯವಾಗಿ ರಂಜಿಸಲಿದ್ದಾರೆ. ನಟ ಶಿವರಾಜ್ ಕೆ.ಆರ್.ಪೇಟೆರವರ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿ ಬಂದಿದೆ. ನೀ ಇರಲು ಜೊತೆಯಲ್ಲಿ, ಶಾರದೆ, ಜೈ ಲಲಿತಾ, ಸ್ನೇಹದ ಕಡಲಲ್ಲಿ ಸೀರಿಯಲ್ ಕಲಾವಿದರ ಮಧ್ಯೆ ಪೈಪೋಟಿಯ ಜಟಾಪಟಿ ನಡೆದಿದೆ.
ಸುವರ್ಣ ಪರಿವಾರದ ಕಲಾವಿದರು ಒಂದೇ ಪರಿವಾರದಂತೆ ಮಕರ ಸಾಂಕ್ರಾಂತಿಯನ್ನು ಆಚರಿಸಿ, ಹಬ್ಬದೂಟವನ್ನು ಸವಿದಿದ್ದಾರೆ. ಇದರ ಜೊತೆಗೆ ಸುವರ್ಣ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೂಡ ಇರಲಿದೆ ಎಂದು ವಾಹಿನಿ ತಿಳಿಸಿದೆ.
ಇದೇ ಶುಕ್ರವಾರ ಜನವರಿ 16ರ ಸಂಜೆ 6.30 ರಿಂದ 9.30 ರವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹಬ್ಬದ ಆಚರಣೆ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.