
ಅಶ್ವಿನಿ ಗೌಡ, ಕಿಚ್ಚ ಸುದೀಪ್
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಸೀಸನ್ 12ರ ವಾರದ ಪಂಚಾಯಿತಿ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ವೇದಿಕೆಗೆ ಬಂದಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ಅಶ್ವಿನಿ ಗೌಡ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು. ರಘು ಹಾಗೂ ಗಿಲ್ಲಿ ಮನೆಯಲ್ಲಿರುವ ಎಲ್ಲರಿಗೂ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಅಶ್ವಿನಿ ಗೌಡ ಬಿಗ್‌ಬಾಸ್ ಮುಂದೆ ಸಾಲು ಸಾಲಾಗಿ ದೂರು ನೀಡಿದ್ದರು. ಇದೀಗ ಇದೇ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರಿಗೆ ಎಚ್ಚರಿಗೆ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು, ‘ಏಕವಚನ.. ಏಕವಚನ.. ಏಕವಚನ. ನಿಮಗೆ ಹೋಗಿ, ಬನ್ನಿ ಅಂತ ಕರೆಸಿಕೊಳ್ಳಬೇಕು ಅಂದರೆ ಪ್ರತಿ ಚಿಕ್ಕ ಮಗುವಿಗೂ ಗೌರವ ಕೊಡೋದು ಕಲಿಯಿರಿ. ಇಲ್ಲಿರುವ ಯಾವುದಾದರು ಮಹಿಳಾ ಸದ್ಯಸೆ ನಿಮ್ಮ ಮರ್ಯಾದೆಯನ್ನು ಅಶ್ವಿನಿ ಗೌಡ ಕೈಯಲ್ಲಿ ಕೊಟ್ಟಿದ್ದೀರಾ? ಯಾರು ಇಲ್ಲಿ ಏನನ್ನು ಮಾತನಾಡುತ್ತಿದ್ದಾರೆ? ಅಶ್ವಿನಿ ಅವರೇ ಈ ಮನೆಯಲ್ಲಿ ವುಮನ್ ಕಾರ್ಡ್ ಪ್ಲೇ ಮಾಡಬೇಡಿ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.