ADVERTISEMENT

ಬೈಕ್‌ಗೆ ಟ್ರಕ್‌ ಡಿಕ್ಕಿ: 23 ವರ್ಷದ ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ ಸಾವು

ಪಿಟಿಐ
Published 18 ಜನವರಿ 2025, 2:26 IST
Last Updated 18 ಜನವರಿ 2025, 2:26 IST
<div class="paragraphs"><p>ಅಮನ್ ಜೈಸ್ವಾಲ್</p></div>

ಅಮನ್ ಜೈಸ್ವಾಲ್

   

Credit: Instagram/Aman Jaiswal

ಮುಂಬೈ: ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ (23) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ಕೂಡಲೇ ಕಾಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಕ್ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಧರ್ತಿಪುತ್ರ ನಂದಿನಿ’ ಧಾರಾವಾಹಿಯಲ್ಲಿ ಜೈಸ್ವಾಲ್‌ ಅವರು ಪ್ರಮುಖ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದರು.

‘ಹೊಸ ಕನಸುಗಳು ಮತ್ತು ಅಂತ್ಯವಿಲ್ಲದ ಸಾಧ್ಯತೆಗಳೊಂದಿಗೆ 2025ಕ್ಕೆ ಕಾಲಿಡುತ್ತಿದ್ದೇನೆ’ ಎಂದು ಜೈಸ್ವಾಲ್‌ ಅವರು ಹೊಸ ವರ್ಷದ ಪ್ರಯುಕ್ತ ಇನ್‌ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ಹಂಚಿಕೊಂಡಿದ್ದ ಪೋಸ್ಟ್‌ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.