ADVERTISEMENT

'ಉದಯ ಕನ್ನಡಿಗ' ಪುರಸ್ಕಾರ ಕಾರ್ಯಕ್ರಮ; ಉದಯ ವಾಹಿನಿಯಲ್ಲಿ ಇಂದು ಪ್ರಸಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
ಅಂಕಿತಾ ಅಮರ್‌ 
ಅಂಕಿತಾ ಅಮರ್‌    

ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ‘ಉದಯ ಕನ್ನಡಿಗ–2025’ ಪುರಸ್ಕಾರ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಜ.24 ಮತ್ತು ಜ.25ರ ಸಂಜೆ 6ಕ್ಕೆ ಪ್ರಸಾರವಾಗಲಿದೆ. 

ನಟರಾದ ಶಿವರಾಜ್‌ಕುಮಾರ್‌, ಪ್ರಕಾಶ್‌ ರಾಜ್‌, ಡಾಲಿ ಧನಂಜಯ, ಶ್ರೀನಾಥ್‌, ಉಮಾಶ್ರೀ, ಸಾಧು ಕೋಕಿಲ, ಕವಿ ಬಿ.ಆರ್‌.ಲಕ್ಷ್ಮಣರಾವ್‌, ಪರಿಸರವಾದಿ–ಲೇಖಕ ಶಿವಾನಂದ ಕಳವೆ ಸೇರಿದಂತೆ ಹಲವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಚಿತ್ರ ತಾರೆಯರಾದ ಅಂಕಿತಾ ಅಮರ್‌, ನಿಧಿ ಸುಬ್ಬಯ್ಯ, ರಚನಾ ಇಂದರ್‌, ಮೋಕ್ಷಾ ಕುಶಾಲ್, ಅನುಷಾ ರೈ, ಪೃಥ್ವಿ ಅಂಬಾರ್‌ ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಕನ್ನಡ ಭಾಷೆ, ಪರಂಪರೆಗೆ ಮತ್ತು ಕರ್ನಾಟಕದ ಅಭ್ಯುದಯಕ್ಕೆ ಕೊಡುಗೆ ನೀಡುತ್ತಿರುವ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಾಹಿನಿ ಈ ಪ್ರಶಸ್ತಿ ಆರಂಭಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.