ADVERTISEMENT

ಕೃತಕ ಹೂವಿನಲ್ಲಿ ಕಲಾತ್ಮಕ ಬದುಕು

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:45 IST
Last Updated 10 ಜುಲೈ 2019, 19:45 IST
ಚಿತ್ರಗಳು
ಚಿತ್ರಗಳು   

ಕಲೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ವಿದ್ಯಾರಣ್ಯಪುರದ ಶ್ರೀಕಂಠ ಉದಾಹರಣೆ. ಸಮಯವನ್ನು ವ್ಯಯ ಮಾಡದೇ ಏನಾದರೂ ಹೊಸತನ ಕಂಡುಕೊಳ್ಳಬೇಕು ಎಂದು ಕ್ರೇಪ್‌ ಪೇಪರ್‌ ಸಹಾಯದಿಂದ ಹೂವುಗಳನ್ನು ಮಾಡಲಾರಂಭಿಸಿದರು. ಈಗ ಅದೇ ಅವರಿಗೆ ಆದಾಯದ ಮಾರ್ಗವೂ ಆಗಿದೆ.

78 ವರ್ಷದ ಶ್ರೀಕಂಠ ಅವರು ಚಿಕ್ಕ ವಯಸ್ಸಿನಿಂದಲೂ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದವರು. ಮೈಸೂರಿನಲ್ಲಿ ದೇವಸ್ಥಾನದ ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದರು.ವಯಸ್ಸಾದ ನಂತರ ಅದೇ ಕೆಲಸದಲ್ಲಿ ಮುಂದುವರೆಯಲು ಕಷ್ಟವಾದ್ದರಿಂದ ಅದಕ್ಕೆ ವಿದಾಯ ಹೇಳಿದರು. ಬಳಿಕ ಏನಾದರೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕ್ರೇಪ್‌ ಪೇಪರ್‌ ಸಹಾಯದಿಂದ ನೈಜವಾಗಿ ಕಾಣುವಂತಹ ಹೂವುಗಳನ್ನು ಮಾಡಲಾರಂಭಿಸಿದರು.

ಶ್ರೀಕಂಠ ಅವರುಜರ್ಮನಿಯಿಂದ ಆಮದಾಗುವ ಕ್ರೇಪ್‌ ಪೇಪರ್‌ಸಹಾಯದಿಂದ ಹೂವುಗಳನ್ನು ಮಾಡುತ್ತಾರೆ. ದಾಸವಾಳ, ಗುಲಾಬಿ, ಚೆಂಡುಹೂವು, ಸೇವಂತಿಗೆ, ಮಲ್ಲಿಗೆ ಜಡೆ... ಹೀಗೆ ಎಲ್ಲಾ ಬಗೆಯ ಹೂವುಗಳನ್ನು ಪೇಪರ್‌ನಿಂದ ರಚಿಸುತ್ತಾರೆ. ಬಣ್ಣ ಬಣ್ಣದ ಪೇಪರ್‌ನಲ್ಲಿ ಮಾಡಿರುವ ಇವುಗಳು ನೋಡಲು ನೈಜ ಹೂವುಗಳೇನೋ ಎಂಬಂತಿವೆ.

ADVERTISEMENT

‘ನೈಸರ್ಗಿಕ ಹೂವುಗಳು ಒಂದು ಅಥವಾ ಎರಡು ದಿನದಲ್ಲಿ ಬಾಡಿ ಹೋಗುತ್ತವೆ. ನಾನು ಮಾಡುವಈ ಕೃತಕ ಹೂವುಗಳು ಐದು ವರ್ಷಕ್ಕೂ ಅಧಿಕ ಕಾಲ ಬಾಳಿಕೆ ಬರುತ್ತವೆ. ಇವುಗಳನ್ನು ಗೃಹಾಲಂಕಾರಕ್ಕೆ,ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ವೇದಿಕೆ ಅಲಂಕಾರಕ್ಕೆ ಬಳಸಬಹುದು. ಇವುನಿಜವಾದ ಹೂವಿನಂತೆ ಕಂಗೊಳಿಸುತ್ತಿರುತ್ತವೆ’ ಎಂದು ಶ್ರೀಕಂಠ ಹೇಳುತ್ತಾರೆ.

ಶ್ರೀಕಂಠ ಅವರು ಕೃತಕ ಹೂವು ಮಾಡುವ ಬಗ್ಗೆ ವಾರಾಂತ್ಯಗಳಲ್ಲಿ ತರಗತಿಗಳನ್ನು ನಡೆಸುತ್ತಾರೆ. ಸ್ನೇಹಿತರು ಅಪೇಕ್ಷೆಪಟ್ಟಲ್ಲಿ ಅವರ ಮನೆಗಳಲ್ಲೇ ತರಗತಿ ನಡೆಸುತ್ತಾರೆ. ಇವರ ಮೊಮ್ಮಕ್ಕಳು ಸಹ ಇವರಿಗೆ ಹೂವು ಮಾಡುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ.

ಈ ಹೂವುಗಳನ್ನು ಮಾರಾಟ ಮಾಡುತ್ತಾರೆ. ಅಮೆರಿಕದಲ್ಲಿನ ಅವರ ಸ್ನೇಹಿತರು ಸಹ ಈ ಹೂವುಗಳನ್ನು ಇಷ್ಟಪಟ್ಟು ಕೊಂಡುಕೊಂಡಿದ್ದಾರೆ.ಮನೆಯಲ್ಲಿಯೇ ಕುಳಿತು ಸ್ನೇಹಿತರ ಸಹಾಯದಿಂದ ಎಲ್ಲಾ ಕಡೆ ಮಾರಾಟ ಮಾಡುತ್ತಾರೆ.

ನಾಗೇಂದ್ರ ಭೀಮಾನಾಯ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.