ADVERTISEMENT

ನಮ್ಮ ಸೌರವ್ಯೂಹದ ಪ್ರವಾಸಿ ತಾಣಗಳು

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 14:07 IST
Last Updated 28 ಜುಲೈ 2019, 14:07 IST
height mountain
height mountain   

ಭೂಮಿಯ ಮೇಲಿರುವ ಪ್ರವಾಸಿತಾಣಗಳಿಗೆ ನಮ್ಮ ಜೀವನದಲ್ಲಿ ಯಾವಾಗ ಬೇಕಾದರೂ ಭೇಟಿ ನೀಡಬಹುದು. ಆದರೆ, ನಮ್ಮ ಸೌರವ್ಯೂಹದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದೆಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಜನರು ಅಂತರಿಕ್ಷ ಪ್ರವಾಸ ಹೋಗುವ ತಂತ್ರಜ್ಞಾನ ಮತ್ತು ವ್ಯವಸ್ಥೆ ಇಂದು ಇಲ್ಲದೇ ಇರಬಹುದು. ಆದರೆ ಈ ರೀತಿಯ ಚಿಂತನೆಗಳು ನಡೆಯುತ್ತಲೇ ಇವೆ. ಭವಿಷ್ಯದಲ್ಲಿ ಅಂತರಿಕ್ಷ ಪ್ರವಾಸ ಕೈಗೊಳ್ಳುವ ದಿನಗಳು ಬೇಗನೇ ಬರಲಿ ಎಂಬುದೇ ನಮ್ಮ ಆಶಯ.

ನಮಗೆ ಅತ್ಯಂತ ಸಮೀಪವಿರುವ ಚಂದ್ರನ ಹತ್ತಿರ ಈಗಾಗಲೇ ಹೋಗಿ ಬಂದ್ದಿದ್ದಾಗಿದೆ. ಅಲ್ಲಿನ ವಾತಾವರಣ, ಅಲ್ಲಿ ದೊರೆಯುವ ಕಲ್ಲು, ಮಣ್ಣು ಮತ್ತು ಖನಿಜಗಳನ್ನು ಅಲ್ಲಿಂದ ತಂದ್ದಿದ್ದಾಗಿದೆ. ಗಾಳಿಯಿಲ್ಲದ, ನೀರಿಲ್ಲದ ಮತ್ತು ಸದಾ ಬಿಸಿ ವಾತಾವರಣದಿಂದ ಕೂಡಿದ ಚಂದ್ರನ ಅಂಗಳಲ್ಲಿ ಹೆಜ್ಜೆ ಊರಿರುವುದು ಹಳೆಯ ಸಂಗತಿ.ನಮಗೆ ಚಿರಪರಿಚಿತವಾಗಿರುವ ಮಂಗಳನಲ್ಲಿಗೆ ಹೋಗುವುದು ಸಾಧ್ಯವಾದೀತು ಎಂದರೆ, ಭೂಮಿಯ ಮೇಲಿನ ಅತಿ ಎತ್ತರದ ಪರ್ವತ ‘ಹಿಮಾಲಯ’ವನ್ನು ಏರುವುದು ಪ್ರತಿಯೊಬ್ಬ ಪರ್ವತಾರೋಹಿಯ ಕನಸು. ಆದರೆ ಹಿಮಾಲಯಕ್ಕಿಂತ ಮೂರು ಪಟ್ಟು ಎತ್ತರದ ಪರ್ವತ ಮಂಗಳಗ್ರಹದಲ್ಲಿದೆ. ಆದರ ಹೆಸರೇ ‘ಒಲಿಂಪಸ್ ಮಾನ್ಸ್’. ಅಂತರಿಕ್ಷ ಪ್ರವಾಸ ಮಾಡಲು ಇದು ಸೂಕ್ತ ಸ್ಥಳವಾಗಿದೆ.

ಪ್ರವಾಸ ಮಾಡುವಾಗ ಅತ್ಯಂತ ತಣ್ಣಗಿನ ವಾತಾವರಣವಿರುವ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅದರಲ್ಲೂ ಶಿಮ್ಲಾ, ಊಟಿ, ಕೊಡೈಕೆನಾಲ್ ನಂಥ ಪರ್ವತ ಪ್ರದೇಶಗಳನ್ನು ಆರಿಸಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಸೌರವ್ಯೂಹದಲ್ಲಿ ಅತ್ಯಂತ ತಣ್ಣಗಿನ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಸೂರ್ಯನಿಗೆ ಸಮೀಪವಿರುವ ಬುಧಗ್ರಹ ನಮ್ಮ ಕಣ್ಣಿಗೆ ಬೀಳುತ್ತದೆ. ಇಲ್ಲಿ ನೀರನ್ನು ಮಂಜುಗಡ್ಡೆಯ ರೂಪದಲ್ಲಿ ಹಿಡಿದಿಟ್ಟ ಚಿಕ್ಕ ಪುಟ್ಟ ಕುಳಿಗಳನ್ನು ಕಾಣಬಹುದಾಗಿದೆ.

ADVERTISEMENT

1993ರಲ್ಲಿ ನಮ್ಮ ಸೌರವ್ಯೂಹದ ಅತ್ಯಂತ ಬೃಹತ್ ಗಾತ್ರದ ಗ್ರಹ ಗುರುವನ್ನು ಅಧ್ಯಯನ ನಡೆಸಲು ಕಳುಹಿಸಿದ್ದ “ಗೆಲಿಲಿಯೋ ಉಪಗ್ರಹ” ಅಂತರಿಕ್ಷದಲ್ಲಿ ಗುರುಗ್ರಹದತ್ತ ಹೋಗುವಾಗ ದಾರಿಯಲ್ಲಿ ಕ್ಷುದ್ರಗ್ರಹವೊಂದು ಎದುರಾಗಿತ್ತು. ಅದಕ್ಕೆ ‘ಐಡ’ ಎಂದು ನಾಮಕರಣ ಮಾಡಲಾಯಿತು.ಅಲ್ಲಿ ಖಗೋಳ ವಿಜ್ಞಾನಿಗಳಿಗೆ ಆಶ್ಚರ್ಯವೊಂದು ಕಾಡಿತ್ತು. ಕ್ಷುದ್ರಗ್ರಹಕ್ಕೂ ನೈಸರ್ಗಿಕ ಚಂದ್ರನಿರುತ್ತಾನೆ ಎಂಬ ವಿಷಯ ಐಡಾ ದಿಂದ ತಿಳಿದುಬಂದಿತ್ತು. ಅದನ್ನು ಸುತ್ತುತ್ತಿದ್ದ ಚಂದ್ರನನ್ನು ಡ್ಯಾಕ್ತ್ಯಲ್ ಎಂದು ಕರೆದರೂ. ಈ ಕ್ಷುದ್ರಗ್ರಹ ಇಂದಿಗೂ ಆಶ್ಚರ್ಯದ ಕಣಜವಾಗಿದೆ.

ಸೌರವ್ಯೂಹದಲ್ಲಿ ಅತ್ಯಂತ ನಯನ ಮನೋಹರವಾದ ಉಂಗುರಗಳನ್ನು ಧರಿಸಿದಂತೆ ಕಾಣುವ ಶನಿಗ್ರಹಕ್ಕೆ ಭೇಟಿ ನೀಡದೆ ಇರಲು ಹೇಗೆ ಸಾಧ್ಯ? ಗುರುಗ್ರಹ, ಯುರೇನಸ್ ಮತ್ತು ನೆಫ್ಟೂನ್ ಗ್ರಹಗಳಿಗೂ ಉಂಗುರಗಳಿದ್ದರೂ ಅವು ಶನಿಗ್ರಹದ ಉಂಗುರದಷ್ಟು ಆಕರ್ಷಣೀಯವಾಗಿಲ್ಲ. ಉಂಗುರದಂತೆ ಕಾಣುವ ಈ ಪದರ ಮಂಜುಗಡ್ಡೆಯ ತುಣುಕುಗಳು ಮತ್ತು ದೂಳಿನ ಕಣಗಳಿಂದ ಮಾಡಲ್ಪಟ್ಟಿದೆ. ಅದು ಸತತವಾಗಿ ಒಂದಕ್ಕೊಂದು ಬಡಿದು ಮತ್ತೆ ತುಣುಕುಗಳಾಗಿ ಸಿಡಿಯುತ್ತಲೇ ಇರುತ್ತದೆ. ಅಮೇರಿಕಾ,ಯುರೋಪ್ ಮತ್ತು ಇಟಲಿಯ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಾಗಿ ‘ಕ್ಯಾಸಿನಿ’ ಎಂಬ ನೌಕೆಯನ್ನು ಶನಿಗ್ರಹದತ್ತ ಕಳುಹಿಸಿದ್ದರು. ಹಾಗಾಗಿ ಇದೊಂದು ಉತ್ತಮ ಪ್ರವಾಸಿ ತಾಣವಲ್ಲವೇ? ಇನ್ನು ಗುಹೆಗಳನ್ನು ಅನ್ವೇಷಣೆ ಮಾಡುವವರಿಗೆ ನಮ್ಮ ಸೌರವ್ಯೂಹದ ಏಳನೇಯ ಗ್ರಹ ಯುರೇನಸ್ ನ ಉಪಗ್ರಹವಾದ ‘ಮಿರಾಂಡ’ ಸೂಕ್ತವಾದ ಜಾಗ. ಏಕೆಂದರೆ ಯಂತ್ರಗಳಿಗೂ ಸವಾಲೆಸೆಯುವ ಗುಹಾರಚನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇಂಥಅಂತರಿಕ್ಷದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದೂ ಒಂದು ಸಾಹಸವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.