ADVERTISEMENT

ಮಳೆಯಲಿ... ಹಂಪಿಯಲಿ...

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:30 IST
Last Updated 20 ಜುಲೈ 2019, 19:30 IST
ಹಂಪಿಯ ನೋಟ
ಹಂಪಿಯ ನೋಟ   

ಹಂಪಿಯ ರಾಜಬೀದಿಯಲ್ಲಿ ಶತಮಾನಗಳ ಹಿಂದೆ ಮುತ್ತು, ರತ್ನ,ಹವಳಗಳನ್ನು ಬಳ್ಳದಲ್ಲಿ ಅಳೆದು ಮಾರಲಾಗುತ್ತಿದ್ದ ಸಂಗತಿ ಅಲ್ಲಿನ
ಹಾದಿ–ಬೀದಿಯಲ್ಲಿ ಸುತ್ತಾಡುವಾಗಲೆಲ್ಲ ಇಂದಿನವರಿಗೆ ಬೆರಗು ಮೂಡಿಸುಮೂಡಿಸುವಂಥಹದ್ದು. ಆ ವೈಭಕ್ಕೆ ಮೂಕಸಾಕ್ಷಿಯಾಗಿ ನಿಂತ ಇಲ್ಲಿನ ಸ್ಮಾರಕಗಳಲ್ಲಿ ಮುತ್ತು, ರತ್ನಗಳಿಗೂ ಮಿಗಿಲಾದ ಏನೋ ಬೆಡಗಿದೆ.

ಮಳೆ ಸುರಿದು ನಿಂತಾಗ ಈ ಸ್ಮಾರಕಗಳು ಏನು ಮಾಡುತ್ತವೆ ಗೊತ್ತಾ?

ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಮೊನ್ನೆ ಇದೇ ಕುತೂಹಲದಿಂದ ಕ್ಯಾಮೆರಾ ಹಿಡಿದು ಹಿಂಪಿಯ ಬೀದಿಯಲ್ಲಿ ಸುತ್ತಿದರು. ಮಸೂರದ ಮುಂದೆ ನಿಂತ ಸುಂದರಿಯಂತೆ ಒಂದೊಂದು ಸ್ಮಾರಕವೂ ಅಂಗಳದಲ್ಲಿ ನಿಂತ ನೀರನ್ನೇ ಕನ್ನಡಿ ಮಾಡಿಕೊಂಡು ತನ್ನ ಸೊಬಗನ್ನೆ ಸವಿಯುತ್ತಿತ್ತು. ಹೌದು, ಶಬ್ದಗಳಿಗೆ ನಿಲುಕದ ಆ ದೃಶ್ಯಕಾವ್ಯವನ್ನು ಕಂಡ ಕ್ಯಾಮೆರಾ ಮಾತ್ರ ಎಡೆಬಿಡದೆ ಕಣ್ಣು ಮಿಟುಕಿಸಿತು...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.