ADVERTISEMENT

ಕೆರೆ ಸ್ವಚ್ಛತೆಗೆ ರೋಬೊ ನೆರವು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:00 IST
Last Updated 21 ಮಾರ್ಚ್ 2019, 20:00 IST
   

ಮಾಲಿನ್ಯದಸಮಸ್ಯೆ ಎದುರಿಸುತ್ತಿರುವಕೆರೆ, ಹಳ್ಳ, ಸರೋವರಗಳನ್ನು ಸ್ವಚ್ಛಗೊಳಿಸಲುಬೆಂಗಳೂರು ಎಂವಿಜೆ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ‘ಅಕ್ವಾ ರೋಬೊಟ್‌’ ಕೆರೆಗಳನ್ನು ಶುದ್ಧಗೊಳಿಸುತ್ತದೆ. ಮೊಬೈಲ್‌ ಆ್ಯಪ್ ಮೂಲಕ ನಿಯಂತ್ರಿಸಲಾಗುವ ರೋಬೊಗೆ ದೂರನಿಯಂತ್ರಿತಮೋಟಾರು ಯಂತ್ರ ಅಳವಡಿಸಲಾಗಿದೆ.

ಮೊಬೈಲ್ ಆ್ಯಪ್‌ ಮೂಲಕ ನಿಯಂತ್ರಿಸಬಹುದಾದ ರೋಬೊಗೆ ದೊಡ್ಡ ಜಾಳಿಗೆ (ನೆಟ್‌)ಅಳವಡಿಸಲಾಗಿದೆ. ರೋಬೊವನ್ನು ಕೆರೆಗಳಲ್ಲಿ ಇಳಿಸಿದರೆಪ್ಲಾಸ್ಟಿಕ್‌ ಬಾಟಲ್‌, ಪೆಟ್‌ ಬಾಟಲ್‌, ಪ್ಲಾಸ್ಟಿಕ್‌ ಚೀಲಗಳಂತಹ ಹಗುರವಾದ ತ್ಯಾಜ್ಯಗಳನ್ನು ಸಂಗ್ರಹಿಸುತ್ತದೆ. ಮೊಬೈಲ್‌ ಆ್ಯಪ್‌ ಮೂಲಕ ಅದರ ಚಲನವಲನಗಳನ್ನು ನಿಯಂತ್ರಿಸಬಹುದಾಗಿದೆ.

ADVERTISEMENT

ಎಂವಿಜೆ ಕಾಲೇಜಿನಲ್ಲಿ ಈಚೆಗೆ ನಡೆದ ರೋಟೆಕ್ಸ್‌ 9.0 ಅಂತರರಾಷ್ಟ್ರೀಯ ತಂತ್ರಜ್ಞಾನ ಮೇಳದಲ್ಲಿ ಈ ರೋಬಾಟ್ ಪ್ರದರ್ಶಿಸಲಾಯಿತು.ನಾನಾ ರಾಜ್ಯಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮೇಳ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

‘ಇದೊಂದು ಬಹು ಉದ್ದೇಶಿತ ರೋಬೊ ಆಗಿದ್ದು, ಬೇರೆ ಉದ್ದೇಶಗಳಿಗೂ ಬಳಸಬಹುದಾಗಿದೆ. ರೋಬಾಟ್‌ನಲ್ಲಿ ಅಳವಡಿಸಲಾದಶಬ್ದ ಸಂವೇದಕಗಳ ನೆರವಿನಿಂದ ನೀರಿನಲ್ಲಿ ಕಳೆದ ಹೋದ ವಸ್ತುಗಳನ್ನು ಪತ್ತೆ ಹಚ್ಚಬಹುದು. ‘ಅಕ್ವಾ ಸಾಕರ್‌’ ನೆರವಿನಿಂದ ನೀರಿನಲ್ಲಿ ಫುಟ್‌ಬಾಲ್‌ ಕೂಡ ಆಡಬಹುದು’ ಎನ್ನುತ್ತಾರೆ ರೋಬೊ ಅಭಿವೃದ್ಧಿಪಡಿಸಿದ ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಸೂರಜ್‌ ಸಿಂಗ್‌ ಮತ್ತು ವಿಷ್ಣು ಮಹೇಶ್ವರ್‌.‌

ಈ ರೋಬೊರಿಮೋಟ್ ಕಾರನ್ನು ಹೋಲುತ್ತದೆ.ನೀರಿನಲ್ಲಿ ಚಲಿಸಲು ಅನುಕೂಲವಾಗು ವಂತೆಚಕ್ರಗಳ ಬದಲು ಪೆಡಲ್‌ ಅಳವಡಿಸಲಾಗಿದೆ. ರೋಬೊ ಪುಟ್ಟದಾಗಿರುವ ಕಾರಣ ಹೆಚ್ಚಿನ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಆಗುವುದಿಲ್ಲ.

ಮನೆಗೆಲಸಕ್ಕೆ ರೋಬೊ

ಮತ್ತೊಂದು ವಿದ್ಯಾರ್ಥಿಗಳ ತಂಡ ವಿನ್ಯಾಸ ಗೊಳಿಸಿದಧ್ವನಿ ನಿಯಂತ್ರಿತ ರೋಬೊಟ್‌ ಕೂಡ ಎಲ್ಲರ ಗಮನ ಸೆಳೆಯಿತು. ನಾವು ನೀಡುವ ಆಜ್ಞೆಗಳನ್ನು ಈ ರೋಬೊ ನಿರ್ವಹಿಸುತ್ತದೆ.

ಸ್ವಂತ ಕೋಡ್‌ ಅಭಿವೃದ್ಧಿಪಡಿಸಿ ಧ್ವನಿ ಗುರುತಿಸುವಿಕೆ ಮತ್ತು ನೇವಿಗೇಷನ್‌ ಅಪ್ಲಿಕೇಶನ್‌ ರೂಪಿಸಲಾಗಿದೆ. ಧ್ವನಿ ತರಂಗಗಳನ್ನು ಗುರುತಿಸಿ ಈ ರೋಬೊ ಕಾರ್ಯನಿರ್ವಹಿಸುತ್ತದೆ.

ಬ್ಲೂಟೂತ್‌ಗೆ ನೇವಿಗೇಷನ್‌ ಅಪ್ಲಿಕೇಶನ್‌ ಸಂಪರ್ಕ ಕಲ್ಪಿಸಲಾಗಿದೆ. ರೋಬಾಟ್‌ ಮೋಟರ್‌ಗೆ ಬ್ಲೂಟೂತ್‌ ಜೋಡಿಸಲಾಗಿದೆ. ನಿಜಾವಧಿಯ ಧ್ವನಿ ಸಂವೇದಿ ರೋಬಾಟಗಳಿಗಿಂತ ಇದು ಹೆಚ್ಚು ಕಾರ್ಯಕ್ಷಮತೆ ಹೊಂದಿದೆ ಎನ್ನುತ್ತಾರೆ ರೋಬಾಟ್‌ ರೂಪಿಸಿದ ತಂಡದ ಸದಸ್ಯ ಶಕ್ತಿವೇಲ್‌. ಇಂತಹ ರೋಬಾಟ್‌ಗಳಿಂದ ಮನೆ, ಕಚೇರಿಗಳಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಸಿಕೊಳ್ಳಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.