ADVERTISEMENT

ದೇಶದ 17 ನಗರಗಳ ವಾಯುಗುಣಮಟ್ಟ ಭೀಕರ: ವೈದ್ಯರ ಆತಂಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2021, 14:42 IST
Last Updated 6 ನವೆಂಬರ್ 2021, 14:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶನಿವಾರ (ಸಿಪಿಸಿಬಿ) ಭಾರತದ 138 ನಗರಗಳ ವಾಯು ಗುಣಮಟ್ಟ ಸೂಚ್ಯಂಕಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ 17 ನಗರಗಳ ವಾಯುಗುಣಮಟ್ಟವು ಅತ್ಯಂತ ಕೆಟ್ಟದ್ದಾಗಿದೆ

ಉತ್ತರ ಪ್ರದೇಶದ ಘಾಜಿಯಾಬಾದ್‌ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ಅದರ ವಾಯು ಗುಣಮಟ್ಟ ಸೂಚ್ಯಂಕವು 466 ಆಗಿದೆ.

ಘಾಜಿಯಾಬಾದ್‌ ನಂತರದ ಸ್ಥಾನಗಳಲ್ಲಿ ಬಾಗ್‌ಪತ್, ವಲ್ಲಬ್‌ಗಢ್, ಬುಲಂದ್‌ಶಹರ್, ಚಾರ್ಖಿ ದಾದ್ರಿ, ದೆಹಲಿ, ಫರಿದಾಬಾದ್, ಫಿರೋಜಾಬಾದ್, ಗ್ರೇಟರ್ ನೋಯ್ಡಾ, ಗುರುಗ್ರಾಮ, ಹಾಪುರ, ಹಿಸಾರ್, ಜಿಂದ್, ಮೀರತ್, ಮೊರಾದಾಬಾದ್, ನೋಯ್ಡಾ ಮತ್ತು ವೃಂದಾವನ ನಗರಗಳು ಸಿಪಿಸಿಬಿ ಪಟ್ಟಿಯಲ್ಲಿವೆ.

ADVERTISEMENT

ದೀಪಾವಳಿ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳ ವಾಯುಗುಣಮಟ್ಟ ಕಳೆದ ಎರಡು ದಿನಗಳಲ್ಲಿ ತೀವ್ರವಾಗಿ ಕುಸಿದಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿನ ವಾಯುಗುಣಮಟ್ಟವು ತೃಪ್ತಿದಾಯಕವಾಗಿದೆ. ಬೆಂಗಳೂರಿನ ವಾಯುಗುಣಮಟ್ಟ ಸೂಚ್ಯಂಕವು 70 ಆಗಿದೆ.

ವಾಯುಮಾಲಿನ್ಯ ಕೋವಿಡ್‌ ಸಾಂಕ್ರಾಮಿಕಕ್ಕಿಂತಲೂ ದೊಡ್ಡದು : ತಜ್ಞರು

ವಾಯುಮಾಲಿನ್ಯವು ಈಗ ಕೋವಿಡ್‌ಗಿಂತ ದೊಡ್ಡ ಅಪಾಯವಾಗಿ ಮಾರ್ಪಟ್ಟಿದೆ ಎಂದು ದೆಹಲಿಯ ಎಐಐಎಂಎಸ್‌ನ ಹೃದ್ರೋಗ ತಜ್ಞ, ಪ್ರಾಧ್ಯಾಪಕ ಅಂಬುಜ್‌ ರಾಯ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ವಯಸ್ಸಾದವರು, ಶ್ವಾಸಕೋಶ ಮತ್ತು ಹೃದಯದ ಸಮಸ್ಯೆಗಳಿರುವ ರೋಗಿಗಳು, ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳು ಮತ್ತು ಗರ್ಭಿಣಿಯರು ಇಂಥ ಕಳಪೆ ವಾಯುಗುಣಕ್ಕೆ ಬಹುಬೇಗ ತುತ್ತಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

‘ಎಲ್ಲರೂ ವಾಯು ಮಾಲಿನ್ಯದಿಂದ ಬಳಲುತ್ತಿದ್ದಾರೆ. ಜನರು ತಲೆನೋವು, ಉಸಿರಾಟದ ಸಮಸ್ಯೆಗಳ ಬಗ್ಗೆ ದೂರುತ್ತಿದ್ದಾರೆ. ವಿಶೇಷವಾಗಿ ಅಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಗಳಿರುವವರು, ಚಿಕ್ಕ ಮಕ್ಕಳು ತುಂಬಾ ಸಮಸ್ಯೆಗೆ ಒಳಗಾಗಿದ್ದಾರೆ. ಈ ಮಾಲಿನ್ಯವು ಮಕ್ಕಳ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು,’ ಎಂದು ವೈದ್ಯ ನರೇಶ್ ಟ್ರೆಹಾನ್ ಎಂಬುವವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.