ADVERTISEMENT

Explainer | ಪಿಎಫ್‌ ಹಣ ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಲಾಕ್‌ಡೌನ್ ರಿಲೀಫ್

ಗಣಪತಿ ಶರ್ಮಾ 
Published 31 ಮಾರ್ಚ್ 2020, 14:09 IST
Last Updated 31 ಮಾರ್ಚ್ 2020, 14:09 IST
   

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೊಷಿಸಿರುವ ಹಿನ್ನೆಲೆಯಲ್ಲಿ ಹಲವುಉದ್ಯೋಗಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥವರಿಗೆ ನೆರವಾಗಲೆಂದು ಕೇಂದ್ರ ಸರ್ಕಾರವುಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರಿಗೆ ಹಣ ಹಿಂಪಡೆಯಲು ಇದ್ದ ನಿಯಮಗಳನ್ನು (ತಾತ್ಕಾಲಿಕ?) ಸಡಿಲಿಸಿದೆ.

ಕೇಂದ್ರ ಹಣಕಾಸು ಸಚಿವರು ಘೋ‍ಷಿಸಿರುವಂತೆ, ಉದ್ಯೋಗಿಗಳುತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೂರು ತಿಂಗಳ ಮೊತ್ತದಷ್ಟು ಅಥವಾ ಭವಿಷ್ಯ ನಿಧಿಯ ತಮ್ಮ ಖಾತೆಯಲ್ಲಿ ಸಂಗ್ರಹವಾಗಿರುವ ಹಣದ ಶೇ 75ರಷ್ಟು (ಯಾವುದು ಕಡಿಮೆಯೋ ಅದು)ಹಣವನ್ನು ಹಿಂಪಡೆಯಲು ಅವಕಾಶವಿದೆ.ಕಾರ್ಮಿಕ ಸಚಿವಾಲಯವೂ ಇದೀಗ ಈ ಪ್ರಕ್ರಿಯೆಗೆಅನುಮತಿ ನೀಡಿದೆ.

ಇದು ಸಾಲ ಅಲ್ಲ. ಹೀಗಾಗಿ ಮರುಪಾವತಿಯ ಗೊಡವೆಯಿಲ್ಲ. ಇದುಕೇಂದ್ರ ಸರ್ಕಾರದ ಅನುದಾನವೂ ಅಲ್ಲ. ಹೀಗಾಗಿ ಅಗತ್ಯವಿಲ್ಲದಿದ್ದರೆ ಖಂಡಿತ ಹಣ ಹಿಂಪಡೆಯಬೇಡಿ.

ADVERTISEMENT

ತುರ್ತು ಹಣಕಾಸು ಅಗತ್ಯ ಪೂರೈಸಿಕೊಳ್ಳುವುದಕ್ಕಾಗಿ ‘ಇಪಿಎಫ್‌’ ಸದಸ್ಯರಿಗೆ ಈ ಅವಕಾಶ ನೀಡಲಾಗಿದೆ. ಈ ವಿಚಾರವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ 1952ಕ್ಕೆ ತಿದ್ದುಪಡಿ ತಂದು ಮಾರ್ಚ್‌ 28ರಂದೇ ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಇಪಿಎಫ್‌ಒ ವೆಬ್‌ಪೋರ್ಟಲ್

ಹಾಗಿದ್ದರೆ ಪಿಎಫ್‌ ಹಣ ಆನ್‌ಲೈನ್ ಮೂಲಕ ಹಿಂಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ:

1. ಮೊದಲು ಇಪಿಎಫ್‌ ವೆಬ್‌ಸೈಟ್ unifiedportal-mem.epfindia.gov.in. ಗೆ ಲಾಗಿನ್ ಆಗಬೇಕು. ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೂರು ತಿಂಗಳ ಮೊತ್ತದಷ್ಟು ಹಣವನ್ನು ಮರಳಿ ಪಾವತಿಸದ ನಿಯಮದಡಿ ಹಿಂದೆ ಪಡೆಯುವುದಕ್ಕೆ ಇದು ಅವಶ್ಯ.

2. ಲಾಗಿನ್ ಆದ ಬಳಿಕ, ವೆಬ್‌ಸೈಟ್‌ನ ಆನ್‌ಲೈನ್ ಸರ್ವೀಸಸ್ ವಿಭಾಗದಲ್ಲಿ ಕ್ಲೇಮ್‌ ಫಾರಂ 31 ಅನ್ನು ಆಯ್ಕೆ ಮಾಡಬೇಕು. ಮುಂದಿನ ಹಂತದಲ್ಲಿ, ಪಿಎಫ್‌ ಅಕೌಂಟ್ ಜತೆ ಲಿಂಕ್ ಮಾಡಲಾಗಿರುವ ಸೇವಿಂಗ್ಸ್‌ ಬ್ಯಾಂಕ್ ಅಕೌಂಟ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ವೆರಿಫೈ ಮಾಡಬೇಕು. ಬಳಿಕ ‘ಪ್ರೊಸೀಡ್ ಫಾರ್ ಆನ್‌ಲೈನ್ ಕ್ಲೇಮ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

3. ಈಗ ವೆಬ್‌ ಪುಟವು ಹಣ ಹಿಂಪಡೆಯುವ ಅರ್ಜಿಗೆ ರಿಡೈರೆಕ್ಟ್ ಆಗುತ್ತದೆ. ಈಗ ‘ಐ ವಾಂಟ್‌ ಟು ಅಪ್ಲೈ’ ಎಂಬ ಟೆಕ್ಸ್ಟ್ ಬಳಿ ಇರುವ ಡ್ರಾಪ್‌ಡೌನ್‌ನಿಂದ ‘ಪಿಎಫ್‌ ಅಡ್ವಾನ್ಸ್‌’ ಅರ್ಜಿ (ಫಾರಂ 31) ಆಯ್ಕೆ ಮಾಡಬೇಕು

4. ಈ ಹಂತದಲ್ಲಿ ಹಣ ಹಿಂಪಡೆಯುವ ಉದ್ದೇಶ ಆಯ್ಕೆ ಮಾಡಬೇಕು. ಎಪಿಎಫ್‌ ವೆಬ್‌ಸೈಟ್‌ನಲ್ಲಿ ಈಗ "outbreak of pandemic (Covid-19)" ಎಂಬ ಹೊಸ ಆಯ್ಕೆ ನೀಡಲಾಗಿದೆ.

5. ಈ ಹಂತದಲ್ಲಿ, ಬ್ಯಾಂಕ್ ಚೆಕ್‌ನ ಸ್ಕ್ಯಾನ್‌ ಮಾಡಿದ ಕಾಪಿಯೊಂದನ್ನು ಅಪ್‌ಲೋಡ್ ಮಾಡಬೇಕು. ಇದರಲ್ಲಿ ಐಎಫ್‌ಎಸ್‌ಸಿ ಕೋಡ್ ಮತ್ತು ಖಾತೆ ಸಂಖ್ಯೆ ಸ್ಪಷ್ಟವಾಗಿ ಕಾಣಿಸುವಂತಿರಬೇಕು. ಅಪ್‌ಲೋಡ್ ಮಾಡುವ ಫೈಲ್ ಜೆಪೆಗ್‌ ಫಾರ್ಮಟ್‌ನಲ್ಲಿರುವುದರ ಜತೆಗೆ ಅದರ ಗಾತ್ರ 100ಕೆಬಿಎಸ್‌ನಿಂದ 500 ಕೆಬಿಎಸ್‌ ಮಿತಿಯಲ್ಲಿರಬೇಕು.

6. ಸ್ವಯಂ ದೃಢೀಕರಣ ಸಂದೇಶಕ್ಕೆ ಸಮ್ಮತಿ ಸೂಚಿಸುವ ಮೂಲಕ ಮುಂದುವರಿಯಬೇಕು

7. ‘ಗೆಟ್ ಆಧಾರ್ ಒಟಿಪಿ’ ಆಯ್ಕೆ ಕ್ಲಿಕ್ ಮಾಡಬೇಕು. ಆಧಾರ್ ಲಿಂಕ್ ಮಾಡಿರುವ ಮೊಬೈಲ್ ದೂರವಾಣಿಗೆ ಒಟಿಪಿ ಸಂದೇಶ ಬರುತ್ತದೆ. ಇದನ್ನು ನಮೂದಿಸಬೇಕು. ಇಲ್ಲಿಗೆ ಕ್ಲೇಮ್‌ ಸಬ್‌ಮಿಷನ್ ಹಂತ ಮುಗಿಯುತ್ತದೆ.

ಇಪಿಎಫ್‌ ಪೋರ್ಟಲ್‌ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಅರ್ಜಿ ಸಲ್ಲಿಸಿದ ಮೂರು ಕೆಲಸದ ದಿನಗಳ (ವರ್ಕಿಂಗ್‌ ಡೇ) ಒಳಗಾಗಿ ಸದಸ್ಯರ ಸೇವಿಂಗ್ಸ್‌ ಅಕೌಂಟ್‌ಗೆ ಹಣ ಸಂದಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.