ADVERTISEMENT

ಕ್ರೀಡಾ ಸಂವಾದ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಕಳಂಕಿತರಿಗೆ ಜೈಲು ಶಿಕ್ಷೆಯೇ ಸರಿ
ದೋನಿ ನಾಯಕತ್ವಕ್ಕಿಂತ ದ್ರಾವಿಡ್ ನಾಯಕತ್ವವೇ ಮೇಲು. ಅಂತಹ ನಾಯಕ ದ್ರಾವಿಡ್ ಹೆಸರಿಗೆ ಕೆಸರು ಎರಚುವಂತೆ ನಡೆದುಕೊಂಡಿರುವ ರಾಜಸ್ತಾನ ರಾಯಲ್ಸ್‌ನ ಮೂವರು ಕಳಂಕಿತ ಆಟಗಾರರಿಗೆ ಜೈಲು ಶಿಕ್ಷೆಯೇ ಸರಿಯಾದ ಶಿಕ್ಷೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಈ ಮೂವರನ್ನು ಕ್ರಿಕೆಟ್‌ನಿಂದ ಶಾಶ್ವತವಾಗಿ ನಿಷೇಧಿಸಲೇಬೇಕು.
  -ಸಂತೋಷ.ಎಸ್.ಹುರುಳಿ, ಕೊಕ್ಕನೂರು, ದಾವಣಗೆರೆ ಜಿಲ್ಲೆ.

ರಾಷ್ಟ್ರೀಯ ಕ್ರೀಡಾ ಚಟುವಟಿಕೆಗಳೆಂದರೆ ಅದು ದೇಶದ ಘನತೆಯ ಪ್ರಶ್ನೆ ಕೂಡಾ ಹೌದು. ಕೋಟ್ಯಂತರ ಕ್ರೀಡಾಭಿಮಾನಿಗಳ ಹಾರೈಕೆ, ಆಶಯಗಳೂ ಇದರ ಒಡಲಲ್ಲಿರುತ್ತದೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡ ಶ್ರೀಶಾಂತ್‌ನಿಂದಾಗಿ ಭಾರತೀಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಇಂತಹವರಿಗೆ ಜೈಲು ಶಿಕ್ಷೆಯಾದರೆ ಬೇರೆ ಆಟಗಾರರು ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆದರುತ್ತಾರೆ.
-ಡಾ.ಕೆ.ವಿ.ಸಂತೋಷ್, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.

ನಿಮ್ಮ ಅನಿಸಿಕೆಯನ್ನುಈ ವಿಳಾಸಕ್ಕೆ ಬರೆಯಿರಿ
ಸಂಪಾದಕರು,ಕ್ರೀಡಾ ಸಂವಾದ,ನಂ: 75, ಎಂ.ಜಿ. ರಸ್ತೆ, ಬೆಂಗಳೂರು 560001

email:kreede@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.