ADVERTISEMENT

‘ಪಚ್ಚನಾಡಿ’ ಎಂದರೆ ಬೆಚ್ಚಿಬೀಳುವ ಪಾಲಿಕೆ

ಸಂಧ್ಯಾ ಹೆಗಡೆ
Published 23 ಜನವರಿ 2021, 19:44 IST
Last Updated 23 ಜನವರಿ 2021, 19:44 IST
ಸಾವಯವ ಗೊಬ್ಬರ ತೋರಿಸಿದ ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದ ಸ್ವಾಮೀಜಿ
ಸಾವಯವ ಗೊಬ್ಬರ ತೋರಿಸಿದ ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದ ಸ್ವಾಮೀಜಿ   

ಮಂಗಳೂರು: ಚಿಕ್ಕಮಗಳೂರು ಮತ್ತುಕರಾವಳಿ ಜಿಲ್ಲೆಗಳಲ್ಲಿ ಕಸ ಸಂಗ್ರಹ ಮತ್ತು ವಿಂಗಡಣೆಯೇ ಸಮಸ್ಯೆ ತಂದೊಡ್ಡಿದೆ.

ನಗರದಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುಡ್ಡೆ ಹಾಕಿದ್ದ ಕಸದ ಬೆಟ್ಟಒಂದೂವರೆ ವರ್ಷದ ಹಿಂದೆ ಸುರಿದ ಭಾರಿ ಮಳೆಗೆ ಕುಸಿದು, ಎರಡು ಕಿ.ಮೀ. ದೂರದವರೆಗೆ ಕೊಚ್ಚಿಕೊಂಡು ಹೋಗಿತ್ತು.

ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ 330 ಟನ್ ಹಾಗೂ ಸಮೀಪದ ಗ್ರಾಮಗಳ 50 ಟನ್ ಸೇರಿ ಒಟ್ಟು 380 ಟನ್ ಘನತ್ಯಾಜ್ಯ ಪಚ್ಚನಾಡಿಯ ಘಟಕದ ಒಡಲು ಸೇರುತ್ತಿದೆ. ಹಳೆಯ ಆರು ಲಕ್ಷ ಟನ್ ಕಸದ ರಾಶಿ ಕರಗಿಸುವುದು ಪಾಲಿಕೆಗೆ ಸವಾಲಾಗಿದೆ. ಹೀಗಾಗಿ ಪಚ್ಚನಾಡಿ ಹೆಸರು ಕೇಳಿದರೆ ಪಾಲಿಕೆಬೆಚ್ಚಿಬೀಳುವಂತಾಗಿದೆ.

ADVERTISEMENT

ಮೆಗಾ ಪ್ಲಾನ್‌: ಸ್ವಚ್ಛ ಭಾರತ ಮಿಷನ್ ಯೋಜನೆಯಡಿತ್ಯಾಜ್ಯ ಸಂಸ್ಕರಣೆಗೆ ಪಾಲಿಕೆ ರೂಪಿಸಿರುವ ₹12.56 ಕೋಟಿ ವೆಚ್ಚದ ‘ಮೆಗಾ ಪ್ಲಾನ್‌‌’ ಟೆಂಡರ್ ಹಂತದಲ್ಲಿದೆ. ಇನ್ನೂ ಎರಡು ಹೊಸ ಯಂತ್ರಗಳ ಮೂಲಕ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು425 ಟನ್‌ಗೆ ಹೆಚ್ಚಿಸುವುದು ಪಾಲಿಕೆ ಉದ್ದೇಶ. ಉರ್ವಸ್ಟೋರ್‌ನಲ್ಲಿರುವ ಎರಡು ಟನ್ ಸಾಮರ್ಥ್ಯದ ಬಯೊಗ್ಯಾಸ್ ಘಟಕದಲ್ಲಿ ಪ್ರತಿನಿತ್ಯ 200 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಈ ಕಸದಿಂದ ಇಂಧನ ಉತ್ಪಾದಿಸಲು ಕರ್ನಾಟಕ ವಿದ್ಯುತ್ ನಿಗಮ ಸಾಧ್ಯತಾ ವರದಿ ಸಿದ್ಧಪಡಿಸುತ್ತಿದೆ’ ಎನ್ನುತ್ತಾರೆ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್.

ಶೂನ್ಯ ಕಸ’ ಎಂಬ ಹೊಸ ಕೂಸು

ಸ್ವಚ್ಛ ಮಂಗಳೂರು ಅಭಿಯಾನದ ಮೂಲಕಐದು ವರ್ಷ ಜಾಗೃತಿ ಮೂಡಿಸಿದ ರಾಮಕೃಷ್ಣ ಮಿಷನ್ ಈಗ ವಸತಿ ಸಮುಚ್ಚಯಗಳಲ್ಲಿ ‘ಶೂನ್ಯ ತ್ಯಾಜ್ಯ’ ಕಾರ್ಯಕ್ರಮ ರೂಪಿಸಿದೆ.

‘ಮೂರು ಮಡಿಕೆ ಸಾಧನ ಕಾರ್ಯಕ್ರಮ’ದ ಅಡಿ ಹಸಿ ಕಸ ಹಾಕಲು 4000 ಮನೆಗಳಿಗೆ ಮಡಿಕೆ ವಿತರಿಸಲಾಗಿದೆ. ಪ್ರತಿ ಮನೆಯಿಂದ ತಿಂಗಳಿಗೆ ಎರಡು ಕೆ.ಜಿ ಸಾವಯುವ ಗೊಬ್ಬರ ಉತ್ಪತ್ತಿಯಾಗುತ್ತದೆ.ಈ ವಸತಿ ಸಮುಚ್ಛಯಗಳಲ್ಲಿ ನಮ್ಮ ಕಾರ್ಯಕರ್ತರೇ ತ್ಯಾಜ್ಯ ನಿರ್ವಹಣೆ ಮಾಡುತ್ತಾರೆ’ ಎನ್ನುತ್ತಾರೆ ಏಕಗಮ್ಯಾನಂದ ಸ್ವಾಮೀಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.