ADVERTISEMENT

ಆಹಾರ | ಹುರುಳಿಕಾಳಿನ ಖಾದ್ಯ

ಕೆ.ವಿ.ರಾಜಲಕ್ಷ್ಮಿ
Published 27 ಡಿಸೆಂಬರ್ 2024, 22:30 IST
Last Updated 27 ಡಿಸೆಂಬರ್ 2024, 22:30 IST
<div class="paragraphs"><p>ಹುರುಳಿ ಕಾಳಿನ ಮಿನಿ ಲಡ್ಡು</p></div>

ಹುರುಳಿ ಕಾಳಿನ ಮಿನಿ ಲಡ್ಡು

   

ಚಳಿಗಾಲಕ್ಕೆ ಹುರುಳಿಕಾಳು ಉತ್ತಮ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಹುರುಳಿಕಾಳು ಕಬ್ಬಿಣ, ಕ್ಯಾಲ್ಸಿಯಂ ಹೆಚ್ಚು ಶರ್ಕರ ಪಿಷ್ಠದಿಂದ ಕೂಡಿದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವುದಕ್ಕೆ ಹುರುಳಿಕಾಳು ಸೇವನೆ ಉತ್ತಮ ಮದ್ದಾಗಬಲ್ಲದು.ಜತೆಗೆ ಶೀತದಿಂದ ದೂರವಿಡುತ್ತದೆ. ಇಂಥ ಹುರುಳಿಕಾಳನ್ನು ಬಳಸಿ ಹಲವು ಖಾದ್ಯ ತಯಾರಿಸಿದ್ದಾರೆ ಕೆ.ವಿ.ರಾಜಲಕ್ಷ್ಮಿ

ಮಿನಿ ಲಡ್ಡು ‌

ADVERTISEMENT

ಬೇಕಾಗುವ ಸಾಮಗ್ರಿ: ಹುರುಳಿಕಾಳು 1 ಕಪ್, ಶೇಂಗಾ 1/4 ಕಪ್, ಒಣಕೊಬ್ಬರಿ ತುರಿ  1/4 ಕಪ್, ಬೆಲ್ಲದ  ಪುಡಿ 1 ಕಪ್, ತುಪ್ಪ 1/4 ಕಪ್, ಏಲಕ್ಕಿ ಪುಡಿ 1 ಚಮಚ.   
ಮಾಡುವ ವಿಧಾನ: ಹುರುಳಿ ಕಾಳನ್ನು 4-5 ಗಂಟೆ ನೆನೆಸಿ, ಬಟ್ಟೆಯ ಮೇಲೆ ಹರವಿ ತೇವ ತೆಗೆದಿಟ್ಟುಕೊಳ್ಳಿ.  ಸಣ್ಣ ಉರಿಯಲ್ಲಿ ಶೇಂಗಾ ಮತ್ತು ಹುರುಳಿಕಾಳನ್ನು  ಪ್ರತ್ಯೇಕವಾಗಿ ಹುರಿಯಿರಿ.  ಒಣಕೊಬ್ಬರಿ ತುರಿಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ. ನಂತರ ಹುರಿದ ಹುರುಳಿ ಕಾಳು, ಶೇಂಗಾ, ಕೊಬ್ಬರಿತುರಿಯನ್ನು ಒಟ್ಟಿಗೆ ಅರೆದು  ತರಿತರಿಯಾಗಿ ಪುಡಿಮಾಡಿಕೊಳ್ಳಿ.  ಬಾಣಲೆಯಲ್ಲಿ ಸ್ವಲ್ಪ ನೀರು  ಹಾಕಿ, ಬೆಲ್ಲವನ್ನು ಕರಗಿಸಿ, ತುಪ್ಪ, ಏಲಕ್ಕಿ ಪುಡಿ, ಅಣಿಯಾದ ಕಾಳಿನ ಪುಡಿಯನ್ನು ಸೇರಿಸಿ ಕೈಯಾಡುತ್ತಿರಿ. ಆಗಾಗ  ಮಿಶ್ರಣ ಚೆನ್ನಾಗಿ ಹೊಂದಿಕೊಂಡು ತಳ ಬಿಡುವಾಗ ಉರಿ ಆರಿಸಿ, ಬಿಸಿ ಇರುವಾಗಲೇ ಸಣ್ಣಸಣ್ಣ ಉಂಡೆಗಳನ್ನಾಗಿ ಕಟ್ಟಿ.

ಹುರುಳಿಕಾಳಿನ ದೋಸೆ

ಬೇಕಾಗುವ ಸಾಮಗ್ರಿ : ಅಕ್ಕಿ 2 ಕಪ್, ಹುರುಳಿಕಾಳು 1/2 ಕಪ್, ಉದ್ದಿನ ಬೇಳೆ  1/2 ಕಪ್, ಸಣ್ಣಗೆ ಕತ್ತರಿಸಿದ ಈರುಳ್ಳಿ 1 ಕಪ್, ರುಚಿಗೆ ತಕ್ಕಷ್ಟು ಉಪ್ಪು.  
ಮಾಡುವ ವಿಧಾನ : ಅಕ್ಕಿ, ಹುರುಳಿಕಾಳು ಮತ್ತು ಉದ್ದಿನಬೇಳೆಗಳನ್ನು ಚೆನ್ನಾಗಿ ತೊಳೆದು 6-8 ಗಂಟೆಗಳ ಕಾಲ ನೆನೆಸಿ, ಈರುಳ್ಳಿಯೊಂದಿಗೆ ಸೇರಿಸಿ ಅರೆದು ಉಪ್ಪು ಸೇರಿಸಿ ಮಿಶ್ರಣ ಮಾಡಿ. 
ಐದು  ನಿಮಿಷ ಮುಚ್ಚಿಡಿ. ನಂತರ ಕಾದ ಹೆಂಚಿನ ಮೇಲೆ ತುಪ್ಪ ಹಾಕಿ, ದೋಸೆ ಹುಯ್ದು ಎರಡೂ  ಕಡೆ ಬೇಯಿಸಿದರೆ, ಹುರುಳಿ ದೋಸೆ ಸಿದ್ಧ. 

ಹುರುಳಿ ಕಾಳಿನ ದೋಸೆ

ತೊವ್ವೆ

ಬೇಕಾಗುವ ಸಾಮಗ್ರಿ: ಹುರುಳಿಕಾಳು 1 ಕಪ್, ಹೆಸರುಬೇಳೆ 1/4 ಕಪ್, ತೊಗರಿಬೇಳೆ 2 ಚಮಚ, ಹಸಿಮೆಣಸಿನಕಾಯಿ 2-3, ಕಾಯಿ ತುರಿ 1/4 ಕಪ್ , ಕರಿಬೇವು 1 ಎಸಳು, ಅರಿಶಿನ 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಕಾಳುಗಳನ್ನು 1/2 ಗಂಟೆ ನೆನೆಸಿ, ಎರಡು ಕಪ್ ನೀರು, ಅರಿಶಿನ ಸೇರಿಸಿ ಕುಕ್ಕರಿನಲ್ಲಿ ಮೂರು  ಸೀಟಿ ಕೂಗಿಸಿ. ಕಾಯಿತುರಿಯನ್ನು ನುಣ್ಣಗೆ ಅರೆದುಕೊಳ್ಳಿ. ಬಾಣಲಿಯಲ್ಲಿ ಒಗ್ಗರಣೆಗೆ ಸಾಸಿವೆ ಸಿಡಿಸಿ ಇಂಗು, ಕರಿಬೇವು ಮೆಣಸಿನಕಾಯಿ, ಅರೆದ ಕಾಯಿ ಸೇರಿಸಿ ಒಂದೆರಡು ನಿಮಿಷ ಹುರಿದು, ಬೆಂದ ಬೇಳೆಕಾಳುಗಳು ಮತ್ತು  ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಐದು ನಿಮಿಷ ಸಣ್ಣ ಉರಿಯಲ್ಲಿ ಇಡಿ. ನಂತರ ಉರಿ ಆರಿಸಿ, ಮುಚ್ಚಳ ಮುಚ್ಚಿ ತಣಿಯಲು ಬಿಡಿ.  

ಹುರುಳಿ ಕಾಳಿನ ತೊವ್ವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.