ADVERTISEMENT

ಬೆಳಕಿನ ಹಬ್ಬಕ್ಕೆ ಸಿಹಿ ರೆಸಿಪಿ: ಕ್ಯಾರೆಟ್‌ ಖೀರ್

ತಪಶ್ಚರಣ
Published 21 ಅಕ್ಟೋಬರ್ 2022, 19:30 IST
Last Updated 21 ಅಕ್ಟೋಬರ್ 2022, 19:30 IST
ಕ್ಯಾರೆಟ್‌ ಖೀರ್
ಕ್ಯಾರೆಟ್‌ ಖೀರ್   

ಕ್ಯಾರೆಟ್‌ ಖೀರ್

ಬೇಕಾಗುವ ಸಾಮಗ್ರಿಗಳು:

ಒಂದು ಟೇಬಲ್‌ ಸ್ಪೂನ್‌ ತುಪ್ಪ,ಹತ್ತು ಅರ್ಧ ಮಾಡಿದ ಗೋಡಂಬಿ, 2 ಟೇಬಲ್‌ ಸ್ಪೂನ್‌ ಒಣದ್ರಾಕ್ಷಿ, ಒಂದುವರೆ ಕಪ್‌ ತುರಿದ ಕ್ಯಾರೆಟ್‌, ನಾಲ್ಕು ಕಪ್‌ ಹಾಲು, ಕಾಲು ಟೀ ಸ್ಪೂನ್‌ ಕೇಸರಿ, ಕಾಲು ಟೀ ಸ್ಪೂನ್‌ ಸಕ್ಕರೆ, ಏಲಕ್ಕಿ ಪುಡಿ, ಎರಡು ಟೇಬಲ್‌ ಸ್ಪೂನ್‌ ಪಿಸ್ತಾ. ಒಂದು ಸ್ಪೂನ್ ಬೆಣ್ಣೆ, ಕಾಲು ಕಪ್‌ ಹಾಲು, ಅರ್ಧ ಕಪ್‌ ಹಾಲಿನ ಪುಡಿ.

ADVERTISEMENT

ಮಾಡುವ ವಿಧಾನ: ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ, ಒಣದ್ರಾಕ್ಷಿ ಹಾಕಿ. ಗೋಡಂಬಿ ಕಂದುಬಣ್ಣಕ್ಕೆ ಬಾಡಿಸಿದ ನಂತರ ಅದನ್ನು ತೆಗೆದಿಡಿ. ತುರಿದ ಕ್ಯಾರೆಟ್‌ ಅನ್ನು ಚೆನ್ನಾಗಿ ಅದೇ ಕಡಾಯಿಯಲ್ಲಿ ಬಾಡಿಸಿ. ಕ್ಯಾರೆಟ್‌ ಸುವಾಸನೆ ಬಿಡುವವರೆಗೂ ಬಾಡಿಸಿ. ಬಣ್ಣ ಗಾಢವಾಗಿ ಬದಲಾದ ಮೇಲೆ ಹಾಲು, ಕೇಸರಿ ಮಿಶ್ರಣ ಮಾಡಿ ಮಧ್ಯಮ ಉರಿಯಲ್ಲಿ ಕುದಿಸಿ.ಹಾಲು ದಪ್ಪವಾಗುವವರೆಗೆ ಕುದಿಸಿ.

ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಹಾಲು ಸೇರಿಸಿ. ಹಾಲು ಬೆಣ್ಣೆ ಚೆನ್ನಾಗಿ ಮಿಳಿತಗೊಂಡ ಮೇಲೆ ಹಾಲಿನ ಪುಡಿ ಸೇರಿಸಿ. ಈ ಮಿಶ್ರಣ ದಪ್ಪವಾದ ಮೇಲೆ ಪಾತ್ರೆಯಿಂದ ಬೇರ್ಪಡುತ್ತದೆ. ಈ ಮಿಶ್ರಣವನ್ನು ಕುದ್ದ ಹಾಲಿನ ಪಾತ್ರೆಗೆ ಹಾಕಿ, ಏಲಕ್ಕಿ ಪುಡಿ ಸೇರಿಸಿ. ಹುರಿದ ಗೋಡಂಬಿ, ಒಣದ್ರಾಕ್ಷಿ, ಕೇಸರಿ ಸೇರಿಸಿ. ಕೊನೆಗೆ ಪಿಸ್ತಾ ಹಾಕಿ. ಬಿಸಿ ಬಿಸಿ ಕ್ಯಾರೆಟ್ ಖೀರ್ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.