ADVERTISEMENT

ಸಾಂಬರ್ ಮಾತ್ರವಲ್ಲ, ಸುಲಭವಾಗಿ ಹೀಗೆ ತಯಾರಿಸಿ ರುಚಿಯಾದ ನುಗ್ಗೆಕಾಯಿ ಪಲ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2025, 10:49 IST
Last Updated 26 ಡಿಸೆಂಬರ್ 2025, 10:49 IST
   

ನುಗ್ಗೆಕಾಯಿಯಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ಆರೋಗ್ಯಕ್ಕೆ ಉಪಯುಕ್ತ ಆಹಾರವಾಗಿದೆ. ಇದರಿಂದ ಅನೇಕ ರೀತಿಯ ಅಡುಗೆಗಳನ್ನು ಮಾಡಬಹದು. ನುಗ್ಗೆಕಾಯಿ ಪಲ್ಯ ಮಾಡುವ ವಿಧಾನ ಇಲ್ಲಿದೆ

ನುಗ್ಗೆಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು

ಶುಚಿ ಮಾಡಿ ಕತ್ತರಿಸಿಕೊಂಡ ನುಗ್ಗೆಕಾಯಿ–ಅಗತ್ಯಕ್ಕೆ ತಕ್ಕಷ್ಟು

ADVERTISEMENT

ಜೀರಿಗೆ–ಅರ್ಧ ಚಮಚ

ಮೆಂತ್ಯೆ– ಅರ್ಧ ಚಮಚ

ಒಣ ಮೆಣಸಿನಕಾಯಿ– 10ರಿಂದ15

ಕೊತ್ತಂಬರಿ ಬೀಜ– ಅರ್ಧ ಚಮಚ

ತೆಂಗಿನ ತುರಿ– ಒಂದು ಕಪ್

ಬೆಳ್ಳುಳ್ಳಿ– 5–ರಿಂದ6 ಎಸಳು

ಅಡುಗೆ ಎಣ್ಣೆ

ಕತ್ತರಿಸಿಕೊಂಡ ಈರುಳ್ಳಿ–1

ಕತ್ತರಿಸಿಕೊಂಡ ಟೊಮೊಟೊ– 1

ಹುಣಸೆ ಹುಳಿ – ಅಗತ್ಯಕ್ಕೆ ತಕ್ಕಷ್ಟು

ಉಪ್ಪು– ರುಚಿಗೆ ತಕ್ಕಷ್ಟು

ಅರಿಶಿಣ ಪುಡಿ– ಕಾಲು ಚಮಚ

ಸಾಂಬಾರ್ ಬೇಳೆ– ಅರ್ಧ ಕಪ್

ಸಾಸಿವೆ– ಕಾಲು ಚಮಚ

ಮಾಡುವ ವಿಧಾನ

ಕತ್ತರಿಸಿ, ತೊಳೆದುಕೊಂಡ ನುಗ್ಗೆಕಾಯಿಯ ಜೊತೆ ಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು, 1ರಿಂದ3 ಲೋಟ ನೀರು ಸೇರಿಸಿ ಬೇಯಿಸಿಕೊಳ್ಳಿ.

ಒಂದು ಪಾತ್ರೆಯಲ್ಲಿ ಜೀರಿಗೆ, ಕೊತ್ತಂಬರಿ ಬೀಜ, ಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ನಂತರ ಒಂದು ಮಿಕ್ಸ್ ಜಾರಿಗೆ ಹುರಿದುಕೊಂಡ ಮಸಾಲೆ, ಸ್ವಲ್ಪ ತೆಂಗಿನ ತುರಿ, ಬೆಳ್ಳುಳ್ಳಿ, ಈರುಳ್ಳಿ, ಅರಿಶಿನ ಪುಡಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.

ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿಕೊಳ್ಳಿ. ನಂತರ ಅದಕ್ಕೆ ಸಾಸಿವೆ, ಜಜ್ಜಿಕೊಂಡ ಬೆಳ್ಳುಳ್ಳಿ, ಹೆಚ್ಚಿಕೊಂಡ ಈರುಳ್ಳಿ, ಟೊಮೆಟೊ, ಅರಿಶಿಣ ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಬೇಯಿಸಿಕೊಂಡ ನುಗ್ಗೆಕಾಯಿ–ಬೇಳೆ ಹಾಗೂ ರುಬ್ಬಿಕೊಂಡ ಮಸಾಲೆ ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಅಗತ್ಯಕ್ಕೆ ತಕ್ಕಷ್ಟು ಹುಣಸೆ ಹುಳಿ ಸೇರಿಸಿ , 10ರಿಂದ15 ನಿಮಿಷ ಬೇಯಿಸಿಕೊಳ್ಳಿ.

ಅನ್ನ, ರೊಟ್ಟಿ ಜತೆ ಸವಿಯಲು ಸಿದ್ದ ನುಗ್ಗೆಕಾಯಿ ಪಲ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.