ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮನೆಗಳಲ್ಲಿ ಗಣೇಶನನ್ನು ಕೂರಿಸಲು ತಯಾರಿಗಳು ಆರಂಭವಾಗುತ್ತವೆ. ಬಗೆಬಗೆಯ ಗಣೇಶ ಮೂರ್ತಿಗಳನ್ನು ಮನೆಗೆ ತಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಮನೆಯಲ್ಲಿ ಗಣೇಶನನ್ನುಕೂರಿಸುವವರು ಗಣೇಶನಿಗೆ ನೈವೇದ್ಯಕ್ಕೆಂದು ಸಿಹಿತಿಂಡಿಗಳನ್ನು ಮಾಡಬೇಕಾಗುತ್ತದೆ. ಅದರಲ್ಲೂ ನಮ್ಮ ಹಬ್ಬಗಳಲ್ಲಿ ರುಚಿಕರವಾದ ಆಹಾರವಿಲ್ಲದೆ ಯಾವುದೇ ಆಚರಣೆಯು ಪೂರ್ಣಗೊಳ್ಳುವುದಿಲ್ಲ. ಗಣೇಶನಿಗೆ ಇಷ್ಟವಾಗುವ ಸಿಹಿತಿನಿಸುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಪಾಯಸ
ಪಾಯಸ : ಪಾಯಸವು ದಕ್ಷಿಣ ಭಾರತದ ಸಾಂಪ್ರದಾಯಿಕ ರುಚಿಕರವಾದ ಅಡುಗೆಯಾಗಿದೆ. ಪಾಯಸದಲ್ಲಿ ವಿಧಗಳಿವೆ. ಅವುಗಳಲ್ಲಿ ರವೆ ಪಾಯಸ ಪಾಯಸ, ಶ್ಯಾವಿಗೆ ಪಾಯಸವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇದರ ತಯಾರಿಕೆಯಲ್ಲಿ ಹಾಲು, ಬೆಲ್ಲ ಹಾಗೂ ತೆಂಗಿನಕಾಯಿಯನ್ನು ಬಳಕೆ ಮಾಡುತ್ತಾರೆ. ದಾಕ್ಷಿ, ಗೋಡಂಬಿಯನ್ನು ಸಹ ಬಳಸಲಾಗುತ್ತದೆ.
ಮೋದಕ
ಮೋದಕ: ಗಣೇಶನಿಗೆ ಮೋದಕವೆಂದರೆ ಪಂಚಪ್ರಾಣ. ಅವನ ಪೂಜೆಯಲ್ಲಿ ಮೋದಕವನ್ನು ಇಡುವುದು ಸಂಪ್ರದಾಯವಾಗಿದೆ. ಮೋದಕವನ್ನು ತಯಾರಿಸಲು ಮೈದಾ ಹಿಟ್ಟು, ಬೆಲ್ಲ, ತೆಂಗಿನಕಾಯಿ, ಗೋಡಂಬಿ, ಏಲಕ್ಕಿ ಹಾಗೂ ಗಸಗಸೆ ಅಗತ್ಯ. ಅಂಗಡಿಗಳಲ್ಲಿ ಹಲವು ಬಗೆಯ ರುಚಿಕರವಾದ ಮೊದಕಗಳು ದೊರೆಯುತ್ತವೆ.
ಹೋಳಿಗೆ(ಒಬ್ಬಟ್ಟು)
ಹೋಳಿಗೆ(ಒಬ್ಬಟ್ಟು) : ಮಹಾರಾಷ್ಟ್ರದಲ್ಲಿ ಹೆಚ್ಚು ಜನಪ್ರಿಯವಾದ ಹೋಳಿಗೆಯನ್ನು ಹೂರಣ ಹಾಗೂ ಮೈದಾಹಿಟ್ಟಿನಿಂದ ತಯಾರಿಸಲಾಗುತ್ತದೆ. ಹೋಳಿಗೆಯಲ್ಲಿ ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಕ್ಯಾರೆಟ್ ಹೋಳಿಗೆ, ಬಾದಾಮಿ ಹೋಳಿಗೆ ಹೀಗೆ ಹಲವು ಬಗೆಗಳಿವೆ. ಈ ಖಾದ್ಯವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನಿಗೆ ಬಹುಜನರು ಇದನ್ನು ಅರ್ಪಿಸುತ್ತಾರೆ.
ಸಿಹಿ ಪೊಂಗಲ್
ಸಿಹಿ ಪೊಂಗಲ್ :ಅನ್ನದ ಜೊತೆಗೆ ಬೆಲ್ಲ, ಒಣ ಹಣ್ಣುಗಳನ್ನು ಸೇರಿಸಿ ತಯಾರಿಸಲಾದ ವಿಶೇಷ ಖಾದ್ಯವೇ ಸಿಹಿ ಪೊಂಗಲ್. ಇದು ಹಬ್ಬಗಳಲ್ಲಿ, ಶುಭ ಸಮಾರಂಭಗಳಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಗಣೇಶನಿಗೂ ಪ್ರಿಯವಾದ ಆಹಾರವಾಗಿದೆ.
ಲಾಡು
ಲಾಡು : ಮೋದಕದಂತೆ ಲಾಡು ಎಂದರೆ ಗಣಪನಿಗೆ ಪಂಚಪ್ರಾಣ. ಅಂಗಡಿಗಳಲ್ಲಿ ಬಗೆಬಗೆಯ ರುಚಿಕರವಾದ ಲಾಡುಗಳು ದೊರೆಯುತ್ತವೆ.
ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುವವರು ಈ ಖಾದ್ಯಗಳನ್ನು ತಯಾರಿಸಿ ಗಣೇಶನಿಗೆ ಅರ್ಪಿಸಬಹುದು. ಮನೆಯಲ್ಲಿರುವ ಮಕ್ಕಳು ಸಹ ಈ ಖಾದ್ಯಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.